ರಬಕವಿಯಲ್ಲಿ ಬಿಜೆಪಿ ನಗರ ಹಾಗು ಗ್ರಾಮೀಣ ಮಂಡಲದಿಂದ ಪ್ರಶಿಕ್ಷಣ ಪ್ರಕೋಷ್ಠ ಅಭ್ಯಾಸ ವರ್ಗದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿದರು.

ಅಭ್ಯಾಸ ವರ್ಗ ಬಿಜೆಪಿಯ ಪರಂಪರೆ-ಸವದಿ
*ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ವೀರರ ಸ್ಮರಣೆ ಮುಖ್ಯ
ರಬಕವಿ-ಬನಹಟ್ಟಿ,ನ10: ತತ್ವ, ಸಿದ್ಧಾಂತ, ಉದ್ದೇಶ, ಕರ್ತವ್ಯ, ಆಯಾಮ, ದೇಶವನ್ನು ಉನ್ನತ ಮಟ್ಟ ಹಾಗು ಅಭಿವೃದ್ಧಿಯತ್ತ ಕೊಂಡೊಯ್ಯುವದು ಸೇರಿದಂತೆ ಪಕ್ಷವನ್ನು ಗ್ರಾಮ ಹಾಗು ವಾರ್ಡ್ ಮಟ್ಟದಲ್ಲಿ ಸಂಘಟಿಸುವ ಮೂಲಕ ಜನಸೇವೆಯ ಮಹತ್ವವನ್ನು ಸಾರುವಲ್ಲಿ ಬಿಜೆಪಿ ಅಭ್ಯಾಸ ವರ್ಗದ ಮೂಲಕ ತನ್ನ ಪರಂಪರೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಪ್ರಶಿಕ್ಷಣ ಪ್ರಕೋಷ್ಠ ಅಭ್ಯಾಸ ವರ್ಗ ಉದ್ಘಾಟಿಸಿ ಅವರು ಮಾನಾಡಿದರು. ದೇಶದ ಏಕತೆಗಾಗಿ ಸ್ವಾತಂತ್ರ್ಯಪೂರ್ವದಿಂದಲೂ ಹಿಂದುತ್ವದ ತಳಹದಿಯ ಮೇಲೆ ಹೋರಾಟ ಮಾಡುತ್ತ ತ್ಯಾಗ, ಬಲಿದಾನ ಮಾಡಿದ ವೀರರು ಆಗಿ ಹೋಗಿದ್ದರಿಂದಲೇ ದೇಶದ ಪ್ರತಿ ನಾಗರಿಕ ನೆಮ್ಮದಿಯ ಬದುಕು ಕಾಣುವಲ್ಲಿ ಕಾಣವಾಗಿದ್ದು, ಅಂಥಹ ಕುಟುಂಬಗಳ ಸ್ಮರಣೆ ಮುಖ್ಯವೆಂದರು. 
ಪ್ರತಿಯೊಬ್ಬ ಕಾರ್ಯಕರ್ತ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಬೇಕು. ಪಕ್ಷವನ್ನು ಯಾವದೇ ಸ್ವಾರ್ಥ ಲಾಭಕ್ಕಾಗಿ ಬಳಸದೆ ಜನಸೇವೆಯಿಂದ ಪ್ರಾಮಾಣಿಕವಾಗಿ ಶ್ರಮಿಸಬೇಕೆ ಹೊರತು ಅಧಿಕಾರದ ವ್ಯಾಮೋಹಕ್ಕಾಗಿ ಪಕ್ಷಕ್ಕೆ ನಷ್ಟ ಮಾಡಬಾರದೆಂದರು.
ಪಕ್ಷದ ಹಿರಿಯರಾದ ಬಸವರಾಜ ಯಂಕಂಚಿ ಮಾತನಾಡಿ, ಸನಾತನದಿಂದಲೂ ಜನಸಂಘದ ಮೂಲಕ ನಗರ ಮಂಡಲ ಪ್ರಶಿಕ್ಷಣ ವರ್ಗ ನಡೆಯುತ್ತಾ ಬಂದಿದೆ. ಪಕ್ಷದ ಬಲಿಷ್ಠತೆಯೊಂದಿಗೆ ದೇಶದ ಏಕತೆ ಸಾರುವಲ್ಲಿ ಅಭ್ಯಾಸ ವರ್ಗದ ಪಾತ್ರ ದೊಡ್ಡದು ಎಂದರು. ದೀನದಯಾಳು ಅಂತ್ಯೋದಯ ಯೋಜನೆಯ ಕಲ್ಪನೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಸುರೇಶ ರೇಣಕೆ, ದೇವಲ ದೇಸಾಯಿ, ಡಿ.ಆರ್. ಪಾಟೀಲ, ಸುರೇಶ ಅಕ್ಕಿವಾಟ, ಶಂಕರ ಹುನ್ನೂರ, ಸಂಕಣ್ಣವರ, ವರ್ಧಮಾನ ಕೋರಿ ಉಪಸ್ಥಿತರಿದ್ದರು.