ರಬಕವಿ ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಮತ್ತು ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಅಪಾರ ಪ್ರಮಾಣದ ಕಲ್ಲುಗಳು ಬಿದ್ದಿರುವುದು.
ನ್ಯಾಯಾಲಯ, ತಹಶೀಲ್ದಾರ್ ಕಾರ್ಯಾಲಯದ ಮಾರ್ಗದಲ್ಲಿ ಕಲ್ಲುಗಳು
ರಬಕವಿ-ಬನಹಟ್ಟಿ,ನ10:ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯಕ್ಕೆ, ನ್ಯಾಯಾಲಯಕ್ಕೆ ಮತ್ತು ಬೆಟ್ಟ ಪ್ರದೇಶದಲ್ಲಿರುವ ಮನೆಗಳು ಹೋಗುವ ಮಾರ್ಗದಲ್ಲಿ ಅಪಾರ ಪ್ರಮಾಣದ ಕಲ್ಲುಗಳು ಬಿದ್ದು ಸಾರ್ವಜನಿಕರಿಗೆ, ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ, ವಕೀಲರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಬಹಳಷ್ಟು ತೊಂದರೆಯಾಗಿದೆ.
ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಇಲ್ಲಿಯ ರಸ್ತೆಯ ಮುಂಭಾಗವನ್ನು ದುರಸ್ತಿ ಮಾಡಲು ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿದ್ದಾರೆ. ಈ ಕಲ್ಲುಗಳು ರಸ್ತೆ ಮೇಲೆ ಅಂದಾಜು ಒಂದು ತಿಂಗಳು ಗತಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ.
ಈ ಕಲ್ಲುಗಳಿಂದಾಗಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಮತ್ತು ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ವಕೀಲರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗನೆ ಈ ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ,ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ವೆಂಕಟೇಶ ನಿಂಗಸಾನಿ, ಬಿ.ಆರ್.ಯಲ್ಲಟ್ಟಿ, ಅಮುಲ ಬದಾಮಿಕರ, ಈಶ್ವರಚಂದ್ರ ಭೂತಿ, ಮಹಾಂತೇಶ ಪದಮಗೊಂಡ, ಸಿದ್ದಪ್ಪ ಮೇಣಿ, ವಿಜಯ ಹೂಗಾರ, ಶ್ರೀಕಾಂತ ಕುಲಕರ್ಣಿ, ರಮೇಶ ಎಕ್ಸಂಬಿ ಆಗ್ರಹಿಸಿದ್ದಾರೆ.

Social Plugin