ಕಿಡ್ನ್ಯಾಪ್ ಸಂಸ್ಕ್ರತಿ ನಮ್ಮದಲ್ಲ-ಸವದಿ
ರಬಕವಿ-ಬನಹಟ್ಟಿ,ನ10:ಮಹಿಳೆಯರ ಮೇಲೆ ಗೌರವವಿದೆ. ಮಹಿಳಾ ಸದಸ್ಯರನ್ನು ಎಳೆದಾಡಿ, ಅಸಭ್ಯವಾದ ವರ್ತನೆ ನಡೆಸಿಲ್ಲ. ಬಹುಮತವಿರುವ ಬಿಜೆಪಿ ಸದಸ್ಯರು ನಮ್ಮವರು ವಿನಾಕಾರಣ ಅವರಿಗೆ ಆಮೀಷವೊಡ್ಡಿ ಕಿಡ್ನ್ಯಾಪ್ ಮಾಡುವ ಮೂಲಕ ದೇಶದ ಕಾನೂನಿಗೆ ಭಂಗ ತರುವಲ್ಲಿ ಕಾಂಗ್ರೆಸ್ ಮುಂದಾಗಿರುವದು ನೀಚ ರಾಜಕಾರಣ ನಡೆಸುತ್ತಿದೆ ಹಕ್ಕು ಮಂಡನೆಗೆ ಅವಕಾಶ ನೀಡಿಲ್ಲವೆಂದು ಮಾಜಿ ಸಚಿವೆ ಉಮಾಶ್ರೀಯವರ ಹೇಳಿಕೆ ಶುದ್ಧ ಸುಳ್ಳು ಅಂತಹ ಕೆಳಮಟ್ಟದ ರಾಜಕೀಯ ನಡೆಸುವ ಸಂಸ್ಕ್ರತಿ ಬಿಜೆಪಿಯಲಿಲ್ಲವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾಲಿಂಗಪೂರ ಪುರಸಭೆಯಲ್ಲಿ ಸಂಪೂರ್ಣ ಬಹುಮತವಿದ್ದರೂ, ಕಾಂಗ್ರೆಸ್ ವಾಮಮಾರ್ಗದಿಂದ ಪುರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನ ಪಡೆಯಬೇಕೆಂಬ ಹುನ್ನಾರ ನಡೆಸಿರುವದು ಜನತೆಗೆ ಅರಿವಾಗಿದೆ. ರಾತ್ರೋ ರಾತ್ರೀ ಸದಸ್ಯರನ್ನು ಕಿಡ್ನ್ಯಾಪ್ ಮಾಡಿದ್ದಲ್ಲದೆ, ಸ್ವತಃ ಉಮಾಶ್ರೀಯವರೇ ಮಹಿಳಾ ಸಚಿವರಾದ ಸಂದರ್ಭದಲ್ಲಿ ಓರ್ವ ಮಹಿಳೆಯಾಗಿ ಮಹಿಳೆಯರ ಮೇಲೆ ಅಗೌರವ ತರುವ ರೀತಿಯಲ್ಲಿ ವರ್ತನೆ ನಡೆಸಿದ್ದಾರೆಂದು ಸವದಿ ಹೇಳಿದರು.
ನಿರೀಕ್ಷಿತ ಗೆಲುವು: ರಾಜ್ಯದ ಶಿರಾ ಹಾಗು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಬಿಜೆಪಿಯದ್ದಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾರ್ಯ ಹಾಗು ಪ್ರಾಮಾಣಿಕ ಅಧಿಕಾರಕ್ಕೆ ಜನತೆ ಗೆಲುವಿನೊಂದಿಗೆ ಸಂದೇಶ ನೀಡಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.
ಬಿಹಾರ ರಾಜ್ಯದಲ್ಲಿ ಎನ್‍ಡಿಎಗೆ ಮತದಾರರು ಅಧಿಕಾರಕ್ಕೆ ಅವಕಾಶ ಕಲ್ಪಿಸಿ ಕೊಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಆಶೀರ್ವಾದ ಮಾಡಿದ್ದಾರೆಂದು ತಿಳಿಸಿದರು.

Social Plugin