ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಶೀಗಿ ಹುಣ್ಣಿಮೆ ನಿಮಿತ್ತವಾಗಿ ಮಹಿಳೆಯರು ಹಾಡುಗಳನ್ನು ಹಾಡಿದರು.
ಗ್ರಾಮೀಣ ಸಂಸ್ಕøತಿಯನ್ನು ಉಳಿಸಿ ಬೆಳೆಸಿ
ರಬಕವಿ-ಬನಹಟ್ಟಿ,ನ3: ಭಾರತೀಯರು ಆಚರಿಸುವ ಪ್ರತಿಯೊಂದು ಹಬ್ಬಗಳು ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿರುತ್ತವೆ. ಅದರಲ್ಲೂ ನಮ್ಮ ಗ್ರಾಮೀಣ ಭಾಗದ ಮಹಿಳೆಯರು ಈಗಲೂ ಕೂಡಾ ನಮ್ಮ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ನಗರದ ಸಮಾಜ ಸೇವಕಿ ಶಾಂತಾ ಮಂಡಿ ತಿಳಿಸಿದರು.
ಅವರು ಶನಿವಾರ ರಾತ್ರಿ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಶೀಗಿ ಹುಣ್ಣಿಮೆ ನಿಮಿತ್ತವಾಗಿ ಹಮ್ಮಿಕೊಂಡ ಹಾಡುಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದಲ್ಲಿ ಶೀಗೆ ಹುಣ್ಣಿಮೆ ಹಾಗೂ ಮುಂಬರುವ ಗೌರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಮಹಿಳೆಯರು ಹಾಡುವ ಸಂಪ್ರದಾಯವನ್ನು ಇಲ್ಲಿಯವರು ಈಗಲೂ ಮುಂದುವರೆಸಿಕೊಂಡು ಬಂದಿರುವುದು ವಿಶೇಷ ಎಂದು ಶಾಂತಾ ಮಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಶೋಭಾ ಬಾಗಲಕೋಟ ಮತ್ತು ಗೌರವ್ವ ಮಾಲಾಪುರ ಶೀಗಿ ಹುಣ್ಣಿಮೆಯ ಮತ್ತು ಭಕ್ತಿ ಗೀತೆಗಳನ್ನು ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಬಾಳವ್ವ ಮಾಲಾಪುರ, ಸುನಂದಾ ಮಾಲಾಪುರ, ಈರವ್ವ ಕತ್ತಿ, ಜಯಶ್ರೀ ಹುಲಜತ್ತಿ ಸೇರಿದಂತೆ ಅನೇಕರು ಇದ್ದರು.

Social Plugin