ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ರೂ. 2ಲಕ್ಷ ಕಳ್ಳತನ ಪ್ರಕರಣ ದಾಖಲು
* ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 
ರಬಕವಿ-ಬನಹಟ್ಟಿ,ಅ3: ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ ಹಾಗೂ ಶಾಸಕಿ ಉಮಾಶ್ರೀ ಅವರ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಸಚಿವೆ ಉಮಾಶ್ರೀ ಸೋಮವಾರ ರಾತ್ರಿ ಬೆಂಗಳೂರಿನಿಂದ ಆಗಮಿಸಿ ತೇರದಾಳ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ರಬಕವಿಯ ವಿದ್ಯಾನಗರದಲ್ಲಿನ ನಿವಾಸದಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಮುಖ್ಯದ್ವಾರದ ಚಿಕಲವನ್ನು ಮುರಿದು ಬೆಡ್ ರೂಮಿನ  ಟ್ರೇಜರಿಯಲ್ಲಿನ ಕಪಾಟು ಒಡೆದು ಅದರಲ್ಲಿದ್ದ 2 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ದೂರಿನಲ್ಲಿ ತಿಳಿಸಿದ್ದಾರೆ.
  ಮಾಜಿ ಶಾಸಕಿ, ಸಚಿವೆ ಹಾಗೂ ಚಿತ್ರ ನಟಿ ಉಮಾಶ್ರೀ ಪತ್ರಿಕೆಯೊಂದಿಗೆ ಮಾತನಾಡಿ, ಭದ್ರತೆ ದೃಷ್ಠಿಯಿಂದ ನಗರದ ಹೊರ ವಲಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಬೇಕಾಗಿತ್ತು. ಆದರೆ ಇವರು ಯಾವುದು ಮಾಡಿಲ್ಲ. ಮಾಜಿ ಶಾಸಕಿ, ಸಚಿವೆ ಮನೆನೇ ಹೀಗಾದರೇ ಇನ್ನೂ ಸಾಮಾನ್ಯ ಜನರ ಮನೆಯ ಸ್ಥಿತಿ ಹೇಗೆ ಎಂಬ ಭಯ ಸಾರ್ವಜನಿಕರಲ್ಲಿ ಉಂಟಾಗುತ್ತಿದೆ. ಇಷ್ಟು ದಿನ ಈ ಪ್ರದೇಶದಲ್ಲಿ ಯಾವುದು ಇಂತಹ ಪ್ರಕರಣ ನಡೆದಿರಲಿಲ್ಲ. ಈಗ ಪ್ರಾರಂಭವಾಗಿದೆ ಎಂದರೆ ಪೊಲೀಸ್ ಇಲಾಖೆಯವರು ಸ್ವಲ್ಪ ಜಾಗ್ರತರಾಗಬೇಕು. ಕೋವಿಡ್-19 ಬಂದಿರುವುದರಿಂದ ಕಡು ಬಡತನದಲ್ಲಿರುವ ಬಡ ಜೀವಿಗಳು ಕೈಯಲ್ಲಿ ದುಡ್ಡು ಇಲ್ಲದೇ ಇರುವುದರಿಂದ ಕಳ್ಳತನ ದರೋಡೆ ಮಾಡುವ ಸಾಧ್ಯತೆಗಳು ಇನ್ನು ಮುಂದೆ ಬರಬಹುದು ಆದ್ದರಿಂದ ಪೊಲೀಸ್ ಇಲಾಖೆಯವರು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. 
`ತೇರದಾಳ ಪೆÇಲೀಸ್ ಠಾಣೆ ವ್ಯಾಪ್ತಿಯ ರಬಕವಿ ಪಟ್ಟಣದ ವಿದ್ಯಾನಗರದಲ್ಲಿ ಭಾನುವಾರ ಮಧ್ಯರಾತ್ರಿ ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಆಗಿರುವ ಕಳ್ಳತನ ಬಗ್ಗೆ ತೇರದಾಳ ಠಾಣೆಯಲ್ಲಿ ಉಮಾಶ್ರೀ ಅವರು ದೂರು ಸಲ್ಲಿಸಿದ್ದು, ಪ್ರಕರಣದ ತನಿಖೆಯನ್ನು ಸಿಪಿಐ ಜೆ. ಕರುಣೇಶಗೌಡ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.---- ವಿಜಯ ಕಾಂಬಳೆ. ಪಿಎಸ್‍ಐ ತೇರದಾಳ.