ರಬಕವಿ-ಬನಹಟ್ಟಿ,ನ28: ರಬಕವಿ-ಬನಹಟ್ಟಿ ನಗರಸಭೆಯ ಹಿಂದಿನ ಪೌರಾಯುಕ್ತರು, ಸದ್ಯ ವಿಜಯಪುರ ಮಹಾನಗರಪಾಲಿಕೆಯ ವ್ಯವಸ್ಥಾಪಕರಾಗಿದ್ದ ರಾಮಚಂದ್ರ ಕೊಡಗೆ ನಿಧನಕ್ಕೆ ರಬಕವಿ-ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘ ಶೃದ್ದಾಂಜಲಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾನಿಪ ಸಂಘದ ಅಧ್ಯಕ್ಷ ನೀಲಕಂಠ ದಾತಾರ ಕೊಡಗೆಯವರು ಸಹೃದಯಿ ಹಾಗೂ ಉತ್ತಮ ಆಡಳಿತಗಾರರಾಗಿದ್ದರು ಅವರ ಅಗಲಿಕೆ ತುಂಬಾ ದುಃಖದ ಸಂಗತಿ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಈಶ್ವರ ಕರೋಳಿ, ಕಿರಣ ಆಳಗಿ, ವಿಶ್ವಜ ಕಾಡದೇವರ, ಮಲ್ಲಿಕಾರ್ಜುನ ತುಂಗಳ, ಬಸಯ್ಯ ವಸ್ತ್ರದ, ಶಿವಾನಂದ ಮಹಾಬಳಶೆಟ್ಟಿ, ಜೆ. ಯು. ಮೊಹಮ್ಮದ, ಚಂದ್ರಶೇಖರ ತುಂಗಳ, ಪ್ರಕಾಶ ಕುಂಬಾರ, ಗಂಗಯ್ಯ ಹಿರೇಮಠ, ಚಿದಾನಂದ ಕಾರಜೋಳ, ಮಹಾದೇವ ಕೋಪರ್ಡೆ, ಬಸವರಾಜ ಪಟ್ಟಣ, ಬಸವರಾಜ ಜಾಲೋಜಿ, ರಾಮು ಕಾಡಾಪೂರ, ರವೀಂದ್ರ ಅಸ್ಟಗಿ, ಯಶವಂತ ವಾಜಂತ್ರಿ, ಯಶವಂತ ವಾಗ್ಮೋರೆ, ಬಸವರಾಜ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.
Social Plugin