ಬನಹಟ್ಟಿಯ ಲಕ್ಷ್ಮಿ ನಗರದಲ್ಲಿರುವ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಗೆ ಗೆಳೆಯರ ಬಳಗದವರು ಉಚಿತ ಪುಸ್ತಕಗಳನ್ನು ವಿತರಣೆ ಮಾಡಿದರು.

ನೂರಾರು ಪುಸ್ತಕಗಳ ವಿತರಣೆ

ಮಕ್ಕಳಿಗೆ ಪಠ್ಯೇತರ ಪುಸ್ತಕಗಳನ್ನು ಓದಲು ನೀಡಿ

ರಬಕವಿ-ಬನಹಟ್ಟಿ,ನ28: ಮಕ್ಕಳಿಗೆ ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳನ್ನು ನೀಡಬೇಕು. ಪಠ್ಯೇತರ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಾಗುತ್ತದೆ ಎಂದು ಸ್ಥಳೀಯ ಎಸ್‍ಆರ್‍ಎ ಸಂಯುಕ್ತ ಪದವಿಪೂರ್ವ ಕಾಲೇಜಿನ ಇಂಗ್ಲಿμï ಪ್ರಾಧ್ಯಾಪಕಿ ಡಾ.ಶಿಲ್ಪಾ ಅಗಡಿ ತಿಳಿಸಿದರು.

ಅವರು ಶನಿವಾರ ಸ್ಥಳೀಯ ಲಕ್ಷ್ಮಿ ನಗರ ಬಡವಾಣೆಯ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಸ್ಥಳೀಯ ಮಕ್ಕಳ ಸಂಗಮ ಮತ್ತು ಗೆಳೆಯರ ಬಳಗದವರು ಹಮ್ಮಿಕೊಂಡ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಉದ್ದಿಮೆದಾರ ಗೋಪಾಲ ಭಟ್ಟಡ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಜೊತೆಗೆ ಪತ್ರಿಕೆಗಳನ್ನು ಓದುವ ರೂಢಿಯನ್ನು ಮಾಡಿಕೊಳ್ಳಬೇಕು. ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಇನ್ನೀತರ ಪುಸ್ತಕಗಳನ್ನು ಮಕ್ಕಳಿಗೆ ಓದಲು ಪಾಲಕರು ನೀಡಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಆರ್. ಎಂ.ಮಡ್ಡಗೋಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಿ.ಕೆ.ಹನಗಂಡಿ, ಎಸ್.ಎಸ್.ಸನಕೆ, ಜೆ.ಎಸ್.ಜಿಗಜಿನ್ನಿ, ರಾಜೇಶ್ವರಿ ಕಾಡದೇವರ, ಎಸ್.ಐ.ಕುಂಚನೂರ, ಆರ್.ಪಿ.ಚಿಕ್ಕೋಡಿ, ಎಸ್.ಎಂ.ಬರಗಡಗಿ, ವಿನಾಯಕ ತಾಂಬಟ, ಕಿರಣ ಆಳಗಿ, ವಿಶ್ವಜ ಕಾಡದೇವರ ಇದ್ದರು.