ರಬಕವಿ-ಬನಹಟ್ಟಿ,ನ28: ಕೇವಲ 23 ವರ್ಷ ವಯಸ್ಸು, ಹುದ್ದೆ ಮಾತ್ರ ದೇಶದ ಅತ್ಯುನ್ನತ ಸ್ಥಾನದಲ್ಲೊಂದಾದ ಭಾರತೀಯ ಸೇನಾ ವಿಭಾಗದ ಲೆಫ್ಟಿನೆಂಟ್ ಆಗಿ ನೇಮಕ. ಇದು ಬಾಗಲಕೋಟೆ ಜಿಲ್ಲೆಯಲ್ಲಿಯೇ ಕಳೆದ 5 ದಶಕಗಳಿಂದ ಯಾರೂ ಮಾಡದ ಸಾಧನೆ ಮಾಡುವಲ್ಲಿ ಈ ಗ್ರಾಮೀಣ ಯುವಕ ಯಶಸ್ಸು ಕಂಡಿದ್ದು ನಿಜಕ್ಕೂ ಶ್ಲಾಘನೀಯ.
ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಪ್ರಕಾಶ ಹಾಗು ಅನಿತಾ ಕಾಪಶಿ ಎಂಬುವರ ಪುತ್ರನಾದ ವಿನೋದ ತನ್ನ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡುವಲ್ಲಿ ಯಶಸ್ಸು ಕಂಡು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತರುವಲ್ಲಿ ಯಶಸ್ಸು ಕಂಡಿದ್ದಾರೆ.
1997 ರಲ್ಲಿ ಜನ್ಮ ತಾಳಿದ ವಿನೋದ ಕಾಪಶಿ ಚಿಕ್ಕ ವಯಸ್ಸಿನಿಂದಲೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಒತ್ತು ನೀಡುತ್ತ, 2007 ರಲ್ಲಿ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಗೊಂಡು 2013 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ನಂತರ 2015 ರಲ್ಲಿ ಧಾರವಾಡದ ಜೆಎಸ್‍ಎಸ್ ಕಾಲೇಜಿನಲ್ಲಿ ಪಿಯುಸಿಯಲ್ಲಿ ಶೇ.95 ರಷ್ಟು ಅಂಕ ಗಳಿಸಿ ರಾಜ್ಯಕ್ಕೆ 3 ನೇ ಸ್ಥಾನ ಪಡೆಯುತ್ತಾರೆ. ನಂತರ ಬಿ.ಎ. ಇಂಗ್ಲೀಷ್ ವಿಭಾಗವನ್ನು ಆಯ್ಕೆ ಮಾಡಿಕೊಂಡ ವಿನೋದ 2018 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 9 ನೇ ಸ್ಥಾನ ಪಡೆದಿದ್ದಲ್ಲದೆ ಇಂಗ್ಲೀಷ್ ಹಾಗು ಅರ್ಥಶಾಸ್ತ್ರ ವಿಷಯಗಳಲ್ಲಿ ಒಟ್ಟಾರೆ 2 ಬಂಗಾರದ ಪದಕವನ್ನು ತನ್ನದಾಗಿಸಿಕೊಂಡು ಸಾಧನೆ ಮಾಡುತ್ತಾರೆ.
ಕ್ರೀಡೆಯಿಂದ ಬದಲಾವಣೆ: ಓದಿನಷ್ಟೇ ಕ್ರೀಡೆಗೂ ಮಹತ್ವ ನೀಡುತ್ತಿದ್ದ ವಿನೋದ ಕಾಪಶಿ ಕ್ರೀಡೆಯಲ್ಲಿ ಮುಂಚೂಣಿ ವಿದ್ಯಾರ್ಥಿಯಾಗಿ ಬೆಳೆದಿದ್ದರು. ಇದೇ ಅವರಿಗೆ ಪ್ರತಿಭಾವಂತ ವಿದ್ಯಾರ್ಥಿಯನ್ನಾಗಿಸಲು ಹೆಚ್ಚಿನ ಸಹಕಾರಿಯಾಗಿದೆ ಎನ್ನುತ್ತಾರೆ.
ಸಿಡಿಎಸ್‍ಇ ಪರೀಕ್ಷೆ: ದೇಶದ ಅತ್ಯುನ್ನತ ಪರೀಕ್ಷೆಯಲ್ಲೊಂದಾದ ಭಾರತೀಯ ಸೇನಾ ವಿಭಾಗದ ಸಿಡಿಎಸ್‍ಇ ಪರೀಕ್ಷೆಯನ್ನು ನರೆದು ತೇರ್ಗಡೆ ಹೊಂದುವ ಮೂಲಕ ಕಳೆದ ನ.21 ರಂದು ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಿಮೆಂಟ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗುತ್ತಾರೆ.
5 ದಶಕಗಳ ದಾಖಲೆ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 5 ದಶಕಗಳ ಹಿಂದೆ ಮುಧೋಳ ತಾಲೂಕಿನಿಂದ ಆಯ್ಕೆಗೊಂಡ ನಂತರ ಗ್ರಾಮೀಣ ಪ್ರದೇಶದ ಯುವಕನೋರ್ವ ಸಿಡಿಎಸ್‍ಇ ಪರೀಕ್ಷೆಯನ್ನು ತೇರ್ಗಡೆ ಹೊಂದಿರುವದು ಇದೇ ಮೊದಲು.
ಪ್ರತಿಭೆ ಎನ್ನುವದು ಎಲ್ಲರಲ್ಲಿಯೂ ಇರುತ್ತದೆ. ಪಾಲಕರು ಹೆಚ್ಚಿನ ವ್ಯಾಸಾಂಗಕ್ಕೆಂದು ಮಕ್ಕಳನ್ನು ಗಮನ ಹರಿಸುವಲ್ಲಿ ಸಾಧ್ಯವಿಲ್ಲ. ಗ್ರಾಮ ಬಿಟ್ಟು ನಗರ ಪ್ರದೇಶದತ್ತ ತೆರಳುವ ಸಂದರ್ಭ ಅಷ್ಟೇ ಪ್ರಾಮಾಣಿಕವಾಗಿ ಶಿಕ್ಷಣ ಕಲಿತು ಪಾಲಕರ ವಿಶ್ವಾಸ ಹಾಗು ಮೆಚ್ಚಿನ ಅಧ್ಯಯನಕ್ಕೆ ಭಂಗ ತರದ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರಮಿಸಬೇಕು. ಜಾಗರೂಕತೆ ಓದಿನೊಂದಿಗೆ ಕ್ರೀಡೆಗೂ ಅಷ್ಟೇ ಮಹತ್ವ ನೀಡಿದಾಗ ಪಾತ್ರ ಸಾಧನೆ ಸಾಧ್ಯವೆಂದು ಹೇಳುತ್ತಾರೆ ವಿನೋದ ಕಾಪಶಿ.
Social Plugin