ರಬಕವಿ ನಗರದ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ತಾಲೂಕಿನ ನೂತನ ನೌಕರರ ಭವನಕ್ಕೆ ಚಾಲನೆ ನೀಡಿ ಮಾತನಾಡುತ್ತಿರುವ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ, ಹಾಗೂ ಶಾಸಕ ಸಿದ್ದು ಸವದಿ ಸೇರಿದಂತೆ ಅನೇಕರಿದ್ದರು.
ನೌಕರರ ಪ್ರತಿ ಸಮಸ್ಯೆಗೂ ಸ್ಪಂದಿಸುವೆ; ಷಡಕ್ಷರಿ
ರಬಕವಿ-ಬನಹಟ್ಟಿ,ನ23: ರಾಜ್ಯದಲ್ಲಿನ ಪ್ರತಿಯೊಬ್ಬ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಪ್ರತಿ ಸಮಸ್ಯೆಗಳಿಗೂ ಸ್ಪಂದಿಸಿ ಅವರ ಹಿತ ಕಾಪಾಡುವ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದರು.
ಸೋಮವಾರ ಬೆಳಿಗ್ಗೆ ರಬಕವಿ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿನ ಕಟ್ಟಡದ ಆವರಣದಲ್ಲಿ ನೂತನ ತಾಲೂಕಾ ಕಾರ್ಯಾಲಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಲವಾರ ವರ್ಷಗಳ ಹಿಂದಿನ ನೌಕರರ ಸಮಸ್ಯೆಗಳನ್ನು ನಮ್ಮ ನಿಮ್ಮೆಲ್ಲರ ನೇತೃತ್ವದ ಹೋರಾಟದ ನಂತರ ಮಾನ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಪರಿಹಾರ ಮಾಡಿದ್ದಾರೆ. ಅದಲ್ಲದೆ ಮುಂದಿನ ತಿಂಗಳಲ್ಲಿ ಕೆಜಿಐಡಿ ಸಾಲ ಸೌಲಭ್ಯವನ್ನು ಸಂಪೂರ್ಣ ಆನಲಾಯಿನ್ ಮತ್ತು ಮುಂದಿನ ವರ್ಷದ ಜನೇವರಿ 2021 ರೊಳಗೆ ಎಲ್ಲಾ ಸರ್ಕಾರಿ ನೌಕರರಿಗೆ ಸಂಪೂರ್ಣ ನಗದು ರಹಿತ ಚಿಕಿತ್ಸೆ ಕೊಡಿಸುವ ಎಲ್ಲ ಪ್ರಕ್ರೀಯೇ ಕೂಡಾ ಮುಗಿದಿದೆ ಅದು ಕೂಡಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಯಂತೆ ರಾಜ್ಯ ಸರ್ಕಾರದ ನೌಕರರಿಗೂ ವೇತನ ಸಮನಾಗಿ ಸಿಗುವಂತೆ ನಾವು ಈಗಾಗಲೇ ಹೋರಾಟ ಮಾಡುತ್ತಿದ್ದೇವೆ ಅದು ಕೂಡಾ ಸದ್ಯದಲ್ಲಿಯೇ ಇಡೇರಲಿದೆ. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ರಾಜ್ಯದ ಪ್ರತಿಯೊಬ್ಬ ನೌಕರರ ಪರವಾಗಿ ಅವರ ಹಿತ ಕಾಪಾಡಲು ನಾವು ಹೋರಾಡುತ್ತೇನೆ. ಸರ್ಕಾರ ಸಂಬಳ ಕೊಡುವುದು ನಮ್ಮ ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲೆಂದು, ತಾವೇಲ್ಲರೂ ಸಹ ವೃತ್ತಿಗೆ ಗೌರವ ಕೊಟ್ಟು ವೃತಹ ಸಮಯ ವ್ಯಯ ಮಾಡದೇ ಈ ರಾಜ್ಯದ ರುಣ ತೀರಿಸುವ ಪ್ರಾಮಾಣಿಕ ಕಾಯಕ ಮಾಡೋಣ ಎಂದು ಎಲ್ಲರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ಷಡಕ್ಷರಿಯವರು ಸಿಎಂ ಕಚೇರಿಯಲ್ಲಿ ಪಾದರಸದಂತೆ ಓಡಾಡಿ ನೌಕರರ ಪ್ರತಿಸಮಸ್ಯೇಗೂ ಸ್ಪಂದಿಸುವುದು ನನಗೆ ತುಂಬಾ ಖುಷಿ ನೀಡಿದೆ. ನೂತನ ರಬಕವಿ ಬನಹಟ್ಟಿ ತಾಲೂಕಾ ನೌಕರರ ಸಂಘವನ್ನು ಪ್ರತ್ಯೇಕವಾಗಿ ರಚಿಸಬೇಕೆಂಬ ತಮ್ಮ ಭಹುದಿನಗಳ ಬೇಡಿಕೆಯನ್ನು ನಾನು ಕೂಡಲೇ ಇಡೇರಿಸುತ್ತೇನೆಂದು ಸವದಿಯವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಖಾಜಾಂಚಿ ಶ್ರೀನಿವಾಸ, ಜಿಲ್ಲಾ ಅಧ್ಯಕ್ಷ ಎಂ. ಬಿ. ಬಳ್ಳಾರಿ, ತಾಲೂಕಾ ಅಧ್ಯಕ್ಷ ಬಿ. ಆರ್. ಹನಗಂಡಿ, ಜಗದೀಶ ಪಾಟೀಲ, ಶಿವರುದ್ರಯ್ಯ ಜಿ. ಸೇರಿದಂತೆ ತಾಲೂಕಿನ ನೂರಾರು ಸೌಕರರು ಹಾಜರಿದ್ದರು.

Social Plugin