ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ರಾಜ್ಯೋತ್ಸವದ ನಿಮಿತ್ತವಾಗಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕನ್ನಡ ಸಂಪರ್ಕ ಸಂವಹನದ ಭಾಗಿಯಾಗಬೇಕು
ರಬಕವಿ-ಬನಹಟ್ಟಿ,ನ2: ಇಂಗ್ಲಿಷ್ನಂತೆ ಕನ್ನಡವೂ ಕೂಡಾ ಪ್ರಮುಖ ಸಂಪರ್ಕ ಸಂವಹನ ಭಾμÉಯಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಕನ್ನಡದಲ್ಲಿ ವ್ಯವಹಾರ ಮಾಡುವುದನ್ನು ಆರಂಭಿಸಬೇಕು ಎಂದು ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ರಾಜ್ಯೋತ್ಸವದ ನಿಮಿತ್ತವಾಗಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇತಿಹಾಸ ಉಪನ್ಯಾಸಕ ಡಾ.ಮಂಜುನಾಥ ಬೆನ್ನೂರ ಮಾತನಾಡಿ, ಭಾರತದ ಸಂಸ್ಕಾರ, ಸಂಸ್ಕøತಿ ಮತ್ತು ಸಂಪ್ರದಾಯ ಶ್ರೇಷ್ಠವಾದುದು. ಇದಕ್ಕೆಲ್ಲ ಮೂಲ ಸ್ಫೂರ್ತಿ ವಾಲ್ಮೀಕಿಯಿಂದ ರಚನೆಯಾಗದ ರಾಮಾಯಣ ಮುಖ್ಯವಾಗಿದೆ.
ಕನ್ನಡ ನಾಡಿನ ಏಕೀಕರಣಕ್ಕಾಗಿ ಅನೇಕರು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಈ ನಾಡು, ನುಡಿ, ನೆಲ ಮತ್ಲತು ಜಲದ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು ಎಂದು ಡಾ.ಬೆನ್ನೂರ ತಿಳಿಸಿದರು.
ಈ ಸಂದರ್ಭದಲ್ಲಿ ವೈ.ಬಿ.ಕೊರಡೂರ, ಡಾ.ಮನೋಹರ ಶಿರಹಟ್ಟಿ, ಡಾ.ರೇಶ್ಮಾ ಗಜಕೋಶ, ಸುರೇಶ ನಡೋಣಿ, ವೆಂಕಟೇಶ ಕುಲಕರ್ಣಿ, ಎನ್.ಎಂ. ಭಜಂತ್ರಿ, ಡಾ.ಗೀತಾ ಗೊಂದಕರ್, ಕನ್ಯಾಕುಮಾರಿ ಹೂಗಾರ, ಆರತಿ ಅಡವಿತೋಟ, ಸುನಂದಾ ಕಾಂಬಳೆ, ಶಿಲ್ಪಾ ಕಾಂಬಳೆ, ಕಿರಣ ಮೊಳೆ ಸೇರಿದಂತೆ ಅನೇಕರು ಇದ್ದರು.

Social Plugin