ಬನಹಟ್ಟಿಯಲ್ಲಿ 1985-86 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಗುರು ವಂದನಾ ಮತ್ತು ಸ್ನೇಹ ಮಿಲನದ ಪ್ರಥಮ ವರ್ಷಾಚರಣೆ ಸಂದರ್ಭದಲ್ಲಿ ಸ್ನೇಹಿತರ ಪರಿಚಯು ಕೈಪಿಡಿಯನ್ನು ಡಾ.ಸಂಜಯ ಹನಗಂಡಿ ಮತ್ತು ಉದ್ದಿಮೆದಾರ ಶಿವು ಭದ್ರನವರ ಬಿಡುಗಡೆ ಮಾಡಿದರು.
ಸ್ನೇಹಿತರ ಸಂಬಂಧ ಶ್ರೇಷ್ಠವಾದುದು
ರಬಕವಿ-ಬನಹಟ್ಟಿ,ನ2: ವಿಶ್ವದಲ್ಲಿ ಸ್ನೇಹಿತರ ಸಂಬಂಧ ಅತ್ಯಂತ ಶ್ರೇಷ್ಠವಾದುದು. ಸ್ನೇಹಿತರಲ್ಲಿ ಪರಸ್ಪರ, ಪ್ರೀತಿ, ವಿಶ್ವಾಸ ಗಾಢವಾಗಿರುತ್ತದೆ ಎಂದು ಸ್ಥಳೀಯ ಜ್ಞಾನದೋಯ ಶಾಲೆಯ ಶಿಕ್ಷಕ ಚಂದ್ರಶೇಖರ ಬಶೆಟ್ಟಿ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ಬಂಗಾರೆವ್ವ ತಟ್ಟಿಮನಿ ಸಭಾ ಭವನದಲ್ಲಿ 1985-86 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗುರು ವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಪ್ರಥಮ ವμರ್Áಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಾಗೇನವರ ಮಾತನಾಡಿ, ಸ್ನೇಹಿತರ ಮಧ್ಯದಲ್ಲಿಯ ಇಂಥ ಕಾರ್ಯಕ್ರಮಗಳು ಪ್ರತಿವರ್ಷ ನಡೆದರೆ ಹಳೆಯ ಅನುಭವಗಳನ್ನು ನೆನೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುರೇಶ ಕೋಪರ್ಡೆ, ಪುಲಕೇಶ ಧುಪದಾಳ, ಸದಾಶಿವ ಬಂಗಿ, ಶಿವು ಭದ್ರನವರ, ಡಾ.ಸಂಜಯ ಹನಗಂಡಿ, ವಿಶ್ವಜ ಕಾಡದೇವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ನೇಹಿತರ ಪರಿಚಯದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಭೀಮಶಿ ಬೆಳಗಲಿ ಪ್ರಾರ್ಥಿಸಿದರು. ವಿಷ್ಣು ಭಟ್ಟಡ ಸ್ವಾಗತಿಸಿದರು. ಅಶೋಕ ಹೂಲಿ ವಂದಿಸಿದರು. ಅಲ್ಲಪ್ಪ ಸವದತ್ತಿ ನಿರೂಪಿಸಿದರು.

Social Plugin