ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿಗೆ ಸ್ಥಳೀಯ ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ 200 ಕ್ಕೂ ಹೆಚ್ಚು ಗ್ರಂಥಗಳನ್ನು ದೇಣಿಗೆಯನ್ನಾಗಿ ಪ್ರಾಚಾರ್ಯ ಡಾ. ಜಿ.ಆರ್.ಜುನ್ನಾಯ್ಕರ್ ಅವರಿಗೆ ನೀಡಿದರು.
ಗ್ರಂಥಾಲಯಕ್ಕೆ ಗ್ರಂಥಗಳ ದೇಣಿಗೆ
ರಬಕವಿ-ಬನಹಟ್ಟಿ,ನ15: ಗ್ರಂಥಾಲಯಗಳು ಉತ್ತಮ ಗ್ರಂಥಗಳಿಂದ ಶ್ರೀಮಂತವಾದರೆ ಮಾತ್ರ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುತ್ತದೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು.
ಅವರು ಈಚೇಗೆ ಸ್ಥಳೀಯ ಮಕ್ಕಳ ಸಂಗಮದವರು ಎಸ್ಟಿಸಿ ಕಾಲೇಜಿಗೆ ದೇಣಿಗೆಯಾಗಿ ನೀಡಿದ 200 ಕ್ಕಿಂತ ಹೆಚ್ಚು ಗ್ರಂಥಗಳನ್ನು ಸ್ವೀಕರಿಸಿ ಮಾತನಾಡಿದರು.
ಸ್ಥಳೀಯ ಮಕ್ಕಳ ಸಂಗಮದವರು ಸಾವಿರಾರು ರೂಪಾಯಿ ಮೊತ್ತದ ಗ್ರಂಥಗಳನ್ನು ದೇಣಿಗೆಯನ್ನಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಗ್ರಂಥಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಡಾ.ಜುನ್ನಾಯ್ಕರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ಮಾತನಾಡಿ, ಇಲ್ಲಿರುವ ಹೆಚ್ಚಿನ ಗ್ರಂಥಗಳು ಮಂಡ್ಯದ ಡಾ.ಪ್ರದೀಪಕುಮಾರ ಹೆಬ್ರಿಯವರ ರಚಿಸಿದ ಕೃತಿಗಳಾಗಿವೆ. 63 ವಯಸ್ಸಿನ ಡಾ.ಹೆಬ್ರಿ ಇದುವರೆಗೆ 425 ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಏಳು ಮಹಾಕಾವ್ಯಗಳಿವೆ ಎಂದರು.
ಗ್ರಂಥಪಾಲಕ ಪ್ರೋ .ವೈ.ಬಿ.ಕೊರಡೂರ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಮನೋಹರ ಶಿರಹಟ್ಟಿ, ಡಾ.ರೇಶ್ಮಾ ಗಜಕೋಶ, ಡಾ.ಪ್ರಕಾಶ ಕೆಂಗನಾಳ, ಸುರೇಶ ನಡೋಣಿ, ಗೀತಾ ಸಜ್ಜನ, ವಿ.ವೈ.ಪಾಟೀಲ, ಶಿವು ಇಟ್ನಾಳ, ಆರತಿ ಅಡವಿತೋಟ, ಶಂಭು ಉಕ್ಕಲಿ, ವಿ.ಬಿ.ಕುಲಕರ್ಣಿ, ಅವಿನಾಶ ಹಟ್ಟಿ ಸೇರಿದಂತೆ ಅನೇಕರು ಇದ್ದರು