ರಬಕವಿ ಬನಹಟ್ಟಿ ನಗರಸಭೆಯ ನೂತನ ಅಧ್ಯಕ್ಷ ಶ್ರೀಶೈಲ ಬೀಳಗಿಯವರನ್ನು ಸ್ಥಳೀಯ ಗೆಳೆಯರ ಬಳಗದ ಸದಸ್ಯರು ಸನ್ಮಾನಿಸಿದರು.
ನಗರದ ಅಭಿವೃದ್ಧಿಗೆ ಪ್ರಥಮ ಆದ್ಯತೆ
ರಬಕವಿ-ಬನಹಟ್ಟಿ,ನ12: ಮುಂಬರುವ ದಿನಗಳಲ್ಲಿ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ನಗರಸಭೆಯ ನೂತನ ಅಧ್ಯಕ್ಷ ಶ್ರೀಶೈಲ ಬೀಳಗಿ ತಿಳಿಸಿದರು.
ಸ್ಥಳೀಯ ಗೆಳೆಯರ ಬಳಗದವರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರಗಳ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರು ಸಹಾಯ, ಸಹಕಾರ ಮತ್ತು ಸಲಹೆಗಳು ಅಗತ್ಯವಾಗಿವೆ. ನಗರಸಭೆಯ ಎಲ್ಲ ಸದಸ್ಯರ ವಿಶ್ವಾಸವನ್ನು ಪಡೆದುಕೊಂಡು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೀಳಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ದಿಮೆದಾರ ಗೋಪಾಲ ಭಟ್ಟಡ ಮಾತನಾಡಿ, ರಬಕವಿ ಬನಹಟ್ಟಿ ನಗರದಲ್ಲಿ ಒಳ ಚರಂಡಿ ಯೋಜನೆ, 24*7 ನೀರು ಪೂರೈಕೆಯ ಯೋಜನೆಗಳು ಮುಕ್ತಾಯಗೊಂಡರೆ ಇಲ್ಲಿಯ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದಷ್ಟು ಬೇಗನೆ ರಸ್ತೆ ಮತ್ತು ಚರಂಡಿಗಳ ದುರಸ್ತಿ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಹೋಳಗಿ, ಮನೋಹರ ಸುಟ್ಟಟ್ಟಿ, ಕಿರಣ ಆಳಗಿ, ವಿಶ್ವಜ ಕಾಡದೇವರ, ಸತೀಷ ಸುಟ್ಟಟ್ಟಿ ಸೇರಿದಂತೆ ಅನೇಕರು ಇದ್ದರು.