ತೇರದಾಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ತಾಲೂಕಾ ಹೋರಾಟ ಸಮೀತಿಯಿಂದ ಕರ್ನಾಟಕ ರಾಜ್ಯೋತ್ಸದ ಧ್ವಜಾರೋಹಣ ತಾಲೂಕಾ ಹೋರಾಟ ಸಮೀತಿ ಅಧ್ಯಕ್ಷ ಬುಜಬಲಿ ಕೆಂಗಾಲಿ ನೆರವೇರಿಸಿದರು.

ತೇರದಾಳದಲ್ಲಿ ತಾಲೂಕಾ ಹೋರಾಟ ಸಮೀತಿಯವರಿಂದ ಮೊಳಗಿದ ಕನ್ನಡ ಕಹಳೆ

ತೇರದಾಳ : ಬಾರಿಸು ಕನ್ನಡ ಡಿಂಡಿಂವ ಓ ಕರ್ನಾಟಕ ಹೃದಯ ಶಿವ... ಎಂದು ಪಟ್ಟಣದ ಪ್ರಮುಖ ಸ್ಥಳಗಳಾದ ಕಲ್ಲಟ್ಟಿ ಗಲ್ಲಿ, ಬಸ್‍ನಿಲ್ದಾಣ ಹತ್ತಿರ, ಕಲೂತಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ತಾಲೂಕಾ ಹೋರಾಟ ಸಮೀತಿ ಹಾಗೂ ಕನ್ನಡ ರಕ್ಷಣಾ ವೇದಿಕೆ ಮತ್ತು ಕನ್ನಡ ಪ್ರೇಮಿಗಳೆಲ್ಲ ಸೇರಿ ರಾಜ್ಯೋತ್ಸವವನ್ನು ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಕನ್ನಡ ದಿನದ ಈ ವಿಶೇಷ ದಿನವನ್ನು ಉಳಿಸುವ ಕಾರ್ಯ ಮಾಡುವುದರ ಜೊತೆಗೆ ಕನ್ನಡ ನಾಡಿನ ವೈಭವ, ಕನ್ನಡ ಭಾಷೆಯ 5000 ವರ್ಷಗಳ ಇತಿಹಾಸ, ಕನ್ನಡದ ಶ್ರೀಮಂತಿಕೆಯ ಬಗ್ಗೆ ಕುರಿತು ಗಣ್ಯರು ಮಾತನಾಡಿದರು. ಸ್ವಾಭಿಮಾನಿ ಕನ್ನಡಿಗರ ಸ್ವಾಭಿಮಾನದಿಂದ ಕನ್ನಡ ರಾಜ್ಯೋತ್ಸವ ಆಚರಿಸಿ ಸ್ವಾಭಿಮಾನ ಮೆರೆದರು.

  ಈ ಸಂದರ್ಭದಲ್ಲಿ ತಾಲೂಕಾ ಹೋರಾಟ ಸಮೀತಿ ಅಧ್ಯಕ್ಷ ಬುಜಬಲಿ ಕೆಂಗಾಲಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ರೇವಣೇಶ ಹಿರೇಮಠ, ಕಲ್ಲಪ್ಪ ಕಬಾಡಗಿ, ಸಿದ್ಧರಾಜ ಉಳಗೊಂಡ, ಪ್ರಭು ಹೂಗಾರ, ಮಲ್ಲಪ್ಪ ಕೌಜಲಗಿ, ಕುಮಾರ ಕೌಜಲಗಿ, ಮಹಾಂತೇಶ ಖವಾಸಿ, ಮನೋಜ ಯಾದವಾಡ, ರವಿ ಸಲಬನ್ನವರ, ಬಾಬು ಸೋರಗಾಂವಿ, ಮುರಿಗೆಪ್ಪ ಹನಗಂಡಿ, ಪಜಲ್ ಅತಾರಾವುತ, ಚಿಕ್ಕಪ್ಪ ಲೋಹಾರ, ಮೈನೋದ್ದೀನ ಮೊಕಾಶಿ, ವಿಠ್ಠಲ ಸಿಂಗೆ, ರಿಯಾಜ ಹನಗಂಡಿ, ದಯಾನಂದ ಹೊಸಕೋಟಿ, ರಾಜು ನದಾಪ, ಲಕ್ಕಪ್ಪ ವಾಜಂತ್ರಿ, ಹಬೀಬ ಅತ್ತಾರ ಸೇರಿದಂತೆ ಇನ್ನಿತರರು ಇದ್ದರು.