ರಬಕವಿ ಬನಹಟ್ಟಿಯಲ್ಲಿ ಹಾಥರಸ್ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಭೀಮ ವಾದ ಬಣದವರು ನಡೆಸಿದ ಪ್ರತಿಭಟನೆಯಲ್ಲಿ ಮುಖಂಡ ಯಲ್ಲಪ್ಪ ಗಣದಾಳ ಮಾತನಾಡಿದರು.
ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ
ರಬಕವಿ-ಬನಹಟ್ಟಿ,ಅ7: ಮಹಿಳೆಯರಿಗೆ ಮತ್ತ ದಲಿತ ಸಮುದಾಯಕ್ಕೆ ರಕ್ಷಣೆ ನೀಡಲು ವಿಫಲವಾದ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು. ಹಾಥರಸ್ ಘಟನೆಯಲ್ಲಿ ಪೆÇಲೀಸ್ರೆ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡ ಯಲ್ಲಪ್ಪ ಗುಣದಾಳ ತಿಳಿಸಿದರು.
ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಾಥರಸ್ ಘಟನೆಯನ್ನು ಖಂಡಿಸಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಶಾಂತಿ, ಸಮಾನತೆ, ನೆಮ್ಮದಿಗೆ ಜಾಗವೇ ಇಲ್ಲದಂತಾಗಿದೆ. ಯೋಗಿಯ ನಾಡಿನಲ್ಲಿ ಅಶಾಂತಿ, ದೌರ್ಜನ್ಯ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಆದಷ್ಟು ಬೇಗನೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗುಣದಾಳ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮತ್ತೊರ್ವ ಮುಖಂಡ ವಿಠ್ಠಲ ಮಿರ್ಜಿ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಮತ್ತು ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದರು. ದಯಾನಂದ ಕಾಳೆ ಮಾತನಾಡಿ ಈ ಘಟನೆ ಕುರಿತು ನಮ್ಮವರೆ ಆದ ಅನೇಕ ಜನ ಪ್ರತಿನಿಧಿಗಳು ಇದ್ದಾರೆ. ಆದರೆ ಅವರು ಯಾರೂ ಈ ಘಟನೆಯನ್ನು ಕುರಿತು ಮಾತನಾಡದೆ ಇರುವುದು ಆಶ್ಚರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ತಹಶೀಲ್ದಾರ್ ಪ್ರಶಾಂತ ಚನಗೊಂಡರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸಭೆಯಲ್ಲಿ ಎಂ.ಟಿ. ಮಾದರ, ಎಸ್.ಕೆ.ಹರಿಜನ, ಡಿ.ಎಸ್.ದೊಡ್ಡಮನಿ, ಸಿದ್ದು ದೊಡ್ಡಮನಿ, ರಾಮು ವಾಘಮೋರೆ, ಎಸ್.ಎಂ. ಆಲಗೂರ, ಎಂ.ಎನ್.ಆಲಗೂರ, ಸಂಜು ಮಾದರ, ಅಮೂಲ ಬಿರಡಿ, ವಿಲಾಸ ಮೇತ್ರಿ, ಎಸ್.ಪಿ.ಮಾಂಗ ಸೇರಿದಂತೆ ಅನೇಕರು ಇದ್ದರು.