ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯಲ್ಲಿರುವ ಅಧಿಕೃತ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ದೊರೆಯುವ ಸೇವೆಗಳನ್ನು ಹೊರತು ಪಡಿಸಿ, ಅನಧಿಕೃತ ಕೇಂದ್ರಗಳಿಂದ ದೊರೆಯುವ ನಕಲಿ ಚುನಾವಣಾ ಗುರುತಿನ ಚೀಟಿ ಸೇರಿದಂತೆ ಅನೇಕ ವಿವಿಧ ಸೇವೆಗಳು ಪಡೆದರೆ ಅದಕ್ಕೆ ಜಿಲ್ಲಾಡಳಿತದ ಸಿಎಸ್‌ಸಿ ಜವಾಬ್ದಾರರಲ್ಲ. ಸಿಎಸ್‌ಸಿಯಿಂದ (ಸಾಮಾನ್ಯ ಸೇವಾ ಕೇಂದ್ರ) ಅಧಿಕೃತ ಸೇವೆ ಪಡೆಯಬೇಕೆಂದು ಜಿಲ್ಲಾ ಸಿಎಸ್‌ಸಿ ಕೇಂದ್ರಗಳ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳು ಸರಕಾರದಿಂದ ಅನುಮೋದನೆ ಪಟ್ಟು, ಜನ ಸಾಮಾನ್ಯರಿಗೆ ಸೇವೆಗಳನ್ನು ಒದಗಿಸುತ್ತವೆ. ಹಾವೇರಿ ಜಿಲ್ಲೆಯಲ್ಲಿ ಅನಧಿಕೃತ ಸೇವಾ ಕೇಂದ್ರದಿಂದ ನಕಲಿ ಚುನಾವಣಾ ಗುರುತಿನ ಚೀಟಿ ನೀಡಿ, ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಜನರು ಸರಕಾರದಿಂದ ಅನುಮತಿ ಪಡೆದ ಅಧಿಕೃತ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆಯಬೇಕು. ಸಿಎಸ್‌ಸಿ ಕೇಂದ್ರಗಳ ಮೇಲೆ ನಾಮಫಲಕ ಹೊಂದಿರುತ್ತವೆ ಹಾಗೂ ಅಧಿಕೃತ ಸೇವೆಗಳನ್ನು ನೀಡುತ್ತವೆ. ಸರಕಾರದಿಂದ ಅನುಮತಿಗೊಳಪಡದ ನಕಲಿ ಸೇವಾಕೇಂದ್ರಗಳಿಂದ ಸೇವೆಗಳನ್ನು ಪಡೆದರೆ ಅದಕ್ಕೆ ಜಿಲ್ಲಾಡಳಿತ ಜವಾಬ್ದಾರರಾಗಿರುವುದಿಲ್ಲ. ಸೇವಾ ಕೇಂದ್ರ ವಿಎಲ್‌ಇಗಳು ಯಾವುದೇ ವಿಧವಾದ ಕಾನೂನು ಬಾಹೀರ ಹಾಗೂ ಅನಧಿಕೃತ ಸೇವೆಗಳನ್ನು ನೀಡಿದರೆ ಕಠಿಣ ಕ್ರಮಕೈಗೊಳ್ಳುವುದಲ್ಲದೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾ ಸಿಎಸ್‌ಸಿ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ ಹಾಗೂ ಶ್ರೀರಾಮ ತಿಳಿಸಿದ್ದಾರೆ.
ವರದಿ : ಮಾಧವಾನಂದ ಪ್ರಭು ಕೋಪರ್ಡೆ ಬನಹಟ್ಟಿ

Social Plugin