ವಿದ್ಯಾರ್ಥಿ ಐಶ್ವರ್ಯ ಬಂಡಿವಡ್ಡರ ದಿನಂಪ್ರತಿ ತಾಯಿಯೊಂದಿಗೆ ಖಡಿ(ಕಲ್ಲು) ಒಡೆಯುವ ಕಾರ್ಯದಲ್ಲಿ ತೊಡಗಬೇಕಾದುದು ಬದುಕಿನ ಅನಿವಾರ್ಯ

ಕಲ್ಲು ಒಡೆಯುತ್ತ ಶೇ.92 ಅಂಕಗಳ `ಐಶ್ವರ್ಯ’ ಪಡೆದ ವಿದ್ಯಾರ್ಥಿನಿಗೆ ಪತ್ರಕರ್ತರಿಂದ ಸಹಾಯ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಅ8: ವಿದ್ಯಾರ್ಥಿ ಜೀವನದಲ್ಲಿ ಎಷ್ಟೇಲ್ಲಾ ತೊಂದರೆ ಬಂದರೂ ಮಹಾನ್ ವ್ಯಕ್ತಿಗಳಾಗಿ ಬೆಳೆಯುವಲ್ಲಿ ತೊಡಕುಗಳು ಸಹಜ. ಇಲ್ಲೋರ್ವ ವಿದ್ಯಾರ್ಥಿನಿ ತೀರಾ ವಿಭಿನ್ನವಾಗಿ ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಅನಿವಾರ್ಯತೆಯೊಂದಿಗೆ ತಾಯಿಯ ಹೆಗಲಿಗೆ ಹೆಗಲು ಕೊಟ್ಟು ಬದುಕಿನ ಬಂಡಿ ನೀಗಿಸುವಲ್ಲಿ ಕಾರಣಳಾಗಿದ್ದಾಳೆ. 
ಅಥಣಿಯ ವಿಮೋಚನಾ ಸಂಸ್ಥೆಯ ಸಂತರಾಮ ಪಪೂ ಮಹಾವಿದ್ಯಾಲಯದಲ್ಲಿ ಈಚೆಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.92 ರಷ್ಟು ಅಂಕ ಗಳಿಸಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗುವ ಮೂಲಕ ಅಚ್ಚರಿ ಅಂಕ ಪಡೆದುಕೊಂಡು ಪ್ರತಿಭೆಯೊಂದಿದ್ದರೆ ಏನೆಲ್ಲ ಸಾಧ್ಯವೆಂದು ಕಲಾ ವಿಭಾಗದಲ್ಲಿ ಈಗಷ್ಟೇ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರವೇಶ ಹೊಂದಿರುವ ಐಶ್ವರ್ಯ ಪ್ರಭು ಮಣ್ಣವಡ್ಡರ ಎಂಬ ವಿದ್ಯಾರ್ಥಿನಿಯ ಸಾಧನೆ ಎಂಥವರನ್ನೂ ನಿಬ್ಬೆರಗು ಮಾಡುವಂಥದ್ದು. ಕೆಲ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಅರೆಕಾಲಿಕ ಉದ್ಯೋಗ ಕಂಡಿದ್ದೇವೆ. ಆದರೆ ಐಶ್ವರ್ಯಳ ಕೆಲಸವೆಂದರೆ ತಾಯಿಯೊಂದಿಗೆ ದಿನಂಪ್ರತಿ ರಸ್ತೆ ಕಾಮಗಾರಿಗೆ ನಡೆಯುವ ಖಡಿ ಒಡೆಯುತ್ತ ಬಂದ ಹಣದಲ್ಲಿ ಕುಟುಂಬ ನಿರ್ವಹಣೆಯ ಜವಾಬ್ದಾರಿ ಎಂಥವರ ಮನಸ್ಸೂ ಕಲಕುವಂಥದ್ದು.
ಈ ಪ್ರತಿಭಾವಂತ ವಿದ್ಯಾರ್ಥಿಯನ್ನು ಗುರ್ತಿಸಿದ ರಬಕವಿ-ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನೀಲಕಂಠ ದಾತಾರ ಅವರು ಶಿಕ್ಷಣ ಕಲಿಕೆಗೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವದನ್ನು 10 ಸಾವಿರ ರೂ. ಧನಸಹಾಯ ಮಾಡುವ ಮೂಲಕ ಇತರರಿಗೆ ಮಾದರಿಯಾದರು.
`ಐಎಎಸ್ ಕನಸು ಕಂಡಿರುವ ಈ ವಿದ್ಯಾರ್ಥಿ ಬಾಳಲ್ಲಿ ನನಸಾಗಲೆಂಬ ಹಾರೈಕೆ ನನ್ನದು.’----ನೀಲಕಂಠ ದಾತಾರ, ಅಧ್ಯಕ್ಷರು, ಕಾನಿಪ ರಬಕವಿ-ಬನಹಟ್ಟಿ.