ತೇರದಾಳ ಪಟ್ಟಣದ ಜಮಖಂಡಿ ಕಾಗವಾಡ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಿರುವ ಯುವಕರು.


ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸಿದ್ಧರಾದ ಯುವಕರು


ತೇರದಾಳ : ಪಟ್ಟಣದ ಮುಖ್ಯರಸ್ತೆಯಾದ ಕಾಗವಾಡ ಜಮಖಂಡಿ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ಹಿಡಿ ಶಾಪ ಹಾಕುತ್ತಿರುವುದು ಹಾಗೂ ಪತ್ರಿಕೆಗಳು ಸುದ್ದಿಯನ್ನು ಮಾಡುತ್ತಿರುವುದನ್ನು ನೋಡಿ ಬೇಸತ್ತು ತೇರದಾಳ ನಗರ ಸುಧಾರಣಾ ಸಮೀತಿಯ ಯುವಕರು ತಾವೇ ಇಂದು ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನು ಮುಚ್ಚಿದರು.
  ಪಟ್ಟಣದ ಮುಖ್ಯ ರಸ್ತೆಯು ಹದೆಗಟ್ಟು ತಗ್ಗು ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಸಂಚರಿಸಲು ಹರ ಸಾಹಸ ಪಡುತ್ತಿದ್ದರು. ಮಳೆಯಾದರೆ ತೀರಾ ತೊಂದರೆ ಅನುಭವಿಸುತ್ತಿದ್ದರು ಕೆಲವರು ವಾಹನದ ಜೊತೆಗೆ ಬೀಳುತ್ತಿದ್ದರು. ಇದನ್ನು ನೋಡಿದ ತೇರದಾಳ ನಗರ ಸುಧಾರಣಾ ಸಮೀತಿಯವರು ಸ್ವತಃ ತಾವೇ ಇಂದು ಸಣಿಕೆ ಬುಟ್ಟಿಯನ್ನು ಹಿಡಿದು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸಿದ್ಧರಾದರು. ಪತ್ರಿಕೆಗಳು ಈ ಕುರಿತು ಸಾಕಷ್ಟು ಬಾರಿ ಸುದ್ದಿ ಮಾಡಿದ್ದವು. ಸಂಭಂಧಿಸಿದ ಇಲಾಖೆಯವರು ಕ್ಯಾರೆ ಅನ್ನದೇ ಅತ್ತ ಲಕ್ಷ ವಹಿಸದೆ ಇರುವುದನ್ನು ನೋಡಿ ಯುವಕರು ಪುರಸಭೆ ಅಧಿಕಾರಿಗಳ ಮೇಲೆ ಕೋಪಗೊಂಡು ತಾವೇ ಕಲ್ಲು ಗರಸು ಹಾಕಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿದರು. 
   ಯುವಕರ ಈ ಕಾರ್ಯವನ್ನು ನೋಡಿ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇನ್ನು ಮುಂದೆಯಾದರೂ ಇಂತಹ ರಸ್ತೆ ಗುಂಡಿಗಳನ್ನು ಹಾಗೂ ಪಟ್ಟಣವನ್ನು ಪ್ರವೇಶಿಸುವ ಹದೆಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು. ಕಾರ್ಯದಲ್ಲಿ ತೊಡಗಿರುವ ಪ್ರಸನ್ ಪಂಚಾಕ್ಷರಿ, ಸತ್ಯಪ್ಪ ಚವಜ ಸೇರಿದಂತೆ ಇನ್ನಿತರ ಸಾರ್ವಜನಿಕರು ಇದ್ದರು.