ರಬಕವಿ ಶ್ರೀನೀಲಕಂಠ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಾತೆಯರ ಯೋಗ ತರಬೇತಿಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಹಳೆಹುಬ್ಬಳ್ಳಿ ನೀಲಕಂಠಮಠದ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.


ಯೋಗದಲ್ಲಿ ರೋಗ ನಿರೋಧ ಶಕ್ತಿಯಿದೆ

ರಬಕವಿ-ಬನಹಟ್ಟಿ : ಪ್ರತಿನಿತ್ಯ ಯೋಗ ಮಾಡಿ ಆರೋಗ್ಯದಿಂದಿದ್ದರೆ ಕೊರೊನಾ ಭಯವಿರುವುದಿಲ್ಲ. ಯೋಗದಲ್ಲಿ ರೋಗ ನಿರೋಧ ಶಕ್ತಿಯಿದೆ. ಭಾರತದ ಎಲ್ಲರೂ ಆತ್ಮನಿರ್ಭರರಾಗಿ ಬದುಕಬೇಕೆಂದು ಹಳೆಹುಬ್ಬಳ್ಳಿ ನೀಲಕಂಠಮಠದ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರಬಕವಿ ಶ್ರೀನೀಲಕಂಠ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಾತೆಯರ ಯೋಗ ತರಬೇತಿಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಯೋಗಿಗಳ ದಿವ್ಯವಾಣಿ ಅರಿಯಬೇಕೆಂದರು.

ಸಮಾಜ ಸೇವಕ ನಂದು ಗಾಯಕವಾಡ, ನಿವೃತ್ತ ಚಿತ್ರಕಲಾ ಶಿಕ್ಷಕ ಮಹಾದೇವ ಕವಿಶೆಟ್ಟಿ, ರಾಮಪುರ ಸಂಸ್ಕøತ ಪಾಠಶಾಲೆಯ ಯೋಗಶಿಕ್ಷಕಿ ಸುವರ್ಣಾ ಪೈ, ಕಾಮಧೇನು ಮಾತೃ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮಿ ಡೋಮನಾಳ ಅವರನ್ನು ಸನ್ಮಾನಿಸಲಾಯಿತು.

ಅಶೋಕ ಕುಚನೂರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ-ಸಾಹಿತಿ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೀನಾ ಮೂಡಲಗಿ, ಭಾಗೀರಥಿ ಕವಟಗೊಪ್ಪ, ಶ್ರೀದೇವಿ ಪರಮಶೆಟ್ಟಿ, ಅದ್ವಿತಿ ಬೆಳಗಲಿ, ವಿಜಯಾ ಬೆಳಗಲಿ, ಗ್ರಿಷ್ಮಾ ಹಳ್ಯಾಳ ಅನಿಸಿಕೆಗಳನ್ನು ಹೇಳಿದರು. ಬಾಲಪ್ರತಿಭೆ ಧಾರಿಣಿ ವಿಜಯ ಕುಚನೂರ ಭರತನಾಟ್ಯ ಪ್ರಸ್ತುತಪಡಿಸಿದಳು.

ಸುಷ್ಮಿತಾ ಮೂಡಲಗಿ, ಚೈತ್ರಾ ಮಿರ್ಜಿ, ಲಾವಣ್ಯಾ ಮಿರ್ಜಿ ಪ್ರಾರ್ಥಿಸಿದರು. ಇಂಧುದರ ಬೆಳಗಲಿ ಸ್ವಾಗತಿಸಿದರು. ರೂಪಾ ಬೆಳಗಲಿ ನಿರೂಪಿಸಿದರು. ಜಯಪ್ರಕಾಶ ಸೊಲ್ಲಾಪುರ ವಂದಿಸಿದರು.