ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 3ನೇ ದಿನ ಯಲ್ಲಟ್ಟಿ ಗ್ರಾಮ ಪಂಚಾಯತಿಯಲ್ಲಿ ಶಾಸಕ ಸಿದ್ದು ಸವದಿ ಉದ್ಯೋಗ ವಾಹಿನಿ ರಥಕ್ಕೆ ಚಾಲನೆ ನೀಡಿದರು. 

ಉದ್ಯೋಗ ವಾಹಿನಿ ರಥಕ್ಕೆ ಶಾಸಕ ಸಿದ್ದು ಸವದಿ ಚಾಲನೆ 
ರಬಕವಿ-ಬನಹಟ್ಟಿ,ಅ12: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 3ನೇ ದಿನ ತಾಲೂಕಿನ ಯಲ್ಲಟ್ಟಿ ಗ್ರಾಮ ಪಂಚಾಯತಿಯಲ್ಲಿ ಶಾಸಕ ಸಿದ್ದು ಸವದಿ ಉದ್ಯೋಗ ವಾಹಿನಿ ರಥಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲಕರವಾದ ಯೋಜನೆ ಆಗಿದ್ದು ನಮ್ಮ ಗ್ರಾಮೀಣ ರೈತರು ಈ ಮಹತ್ವದ ಯೋಜನೆ ಸದುಪಯೋಗ ಪಡೆದುಕೊಳ್ಳುಬೇಕು ಎಂದರು. ರೈತರ ವಿಶೇಷ ಅಭಿಯಾನ ಕಾರ್ಯಕ್ರಮದ ಮೂಲಕ ಗ್ರಾಮೀಣ ರೈತರಿಗೆ ಸೌಲಭ್ಯದ ನೆರವು ದೊರೆಯಲಿ ಎಂದು ರೈತರಿಗೆ ಸಲಹೆ ನೀಡಿದರು.
ಈಗಾಗಲೇ ಆಸಂಗಿ ಅಸ್ಕಿ ಮದನಮಟ್ಟಿ ಗ್ರಾಮಗಳಲ್ಲಿ ಉದ್ಯೋಗ ವಾಹಿನಿ ರಥಕ್ಕೆ ಗ್ರಾಮದಲ್ಲಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ನಾವಲಗಿ, ಜಗದಾಳ, ಚಿಮ್ಮಡ, ಢವಳೇಶ್ವರ ಗ್ರಾಮ ಗಳಲ್ಲಿ ಕೂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಶೇಷ ಅಭಿಯಾನ ಪ್ರಾರಂಭವಾಗಿ ಪ್ರಚಾರ ಕಾಯ9ನಿವಾ9ಹಕ ಸುಗಮವಾಗಿ ಸಾಗಿದೆ.
ಈ ಸಂದರ್ಭದಲ್ಲಿ ಯಲ್ಲಟ್ಟಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ ಕೋರಿ, ಯಲ್ಲಟ್ಟಿ ಗ್ರಾಮದ ಅಧ್ಯಕ್ಷರು, ರಬಕವಿ-ಬನಹಟ್ಟ  ತಾಲೂಕಿನ ಆಯ್‍ಇಸಿ ಸುನಂದಾ ಕಿಶೋರಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು.