`ಪ್ರತಿನಿಧಿ’ ಆಯ್ಕೆ ರಂಪಾಟ: ಬೀದಿಗೆ ಬಂದ ಸದಸ್ಯರು
ರಬಕವಿ-ಬನಹಟ್ಟಿ,ಅ13: ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಭ್ಯರ್ಥಿಯ ರಬಕವಿ-ಬನಹಟ್ಟಿ ತಾಲೂಕು ವ್ಯಕ್ತಿಗೆ ಮತದಾನ ಮಾಡುವ ಹಕ್ಕಿನನ್ವಯ `ಪ್ರತಿನಿಧಿ’ ಆಯ್ಕೆ ಸಂದರ್ಭ ನಡೆಯುತ್ತಿದ್ದ ಮಹತ್ವದ ಸಭೆಯು ಬೀದಿಗೆ ಬಿದ್ದು ಭಾರಿ ರಂಪಾಟವಾದ ಘಟನೆ ಸೋಮವಾರ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಡೆಯಿತು.
ಮುಂದಿನ ತಿಂಗಳು ನಡೆಯಲಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಯಲ್ಲಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ `ಪ್ರತಿನಿಧಿ’ ಆಯ್ಕೆ ಮಾಡುವಲ್ಲಿ ಸಂಘದ ಸದಸ್ಯ ಅಶೋಕ ಕಿತ್ತೂರ ಎಂಬುವರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಸಭೆ ನಡೆಯುತ್ತಿದ್ದಂಎ ಮತ್ತೋರ್ವ ಸದಸ್ಯ ಗುರುಪಾದಪ್ಪ ಮೋಪಗಾರ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಭಾರಿ ಒತ್ತಡ ಬರುತ್ತಿದ್ದಂತೆ ಸದಸ್ಯರಲ್ಲಿ ತೀವ್ರ ತ್ವೇಷಮಯ ವಾತಾವರಣದಿಂದ ಗದ್ದಲ ನಡೆದು ಜಮಖಂಡಿ-ಕುಡಚಿ ರಸ್ತೆ ಮಧ್ಯ ಭಾರಿ ಜನಸ್ತೋಮವೇ ಸೇರುವ ಮೂಲಕ ಭಾರಿ ಜನ ಸೇರುವಲ್ಲಿ ಕಾರಣವಾಗಿತ್ತು.
ಸಕಾಲಕ್ಕೆ ಬನಹಟ್ಟಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಹಾಗು ಪೊಲೀಸ್ ತಂಡ ಆಗಮಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗುವದರೊಂದಿಗೆ ಸಭೆಯನ್ನು ಶಾಂತಯುತವಾಗಿ ಮುನ್ನಡೆಸಲು ಅವಕಾಶ ಕಲ್ಪಿಸಿದರು.
ನಂತರ ಗ್ರಾಮದ ಪ್ರಮುಖರಾದ ಸದಾಶಿವ ಸಂತಿ ಸೇರಿದಂತೆ ಇತರೆ ಹಿರಿಯರ ಸಮ್ಮುಖದಲ್ಲಿ ಪರಿಸ್ಥಿತಿ ತಿಳಿಗೊಳಿಸಿ ಸದಸ್ಯರ ಸಭೆಯಲ್ಲಿ ಈಶ್ವರ ಮದುರಖಂಡಿಯವರಿಗೆ `ಪ್ರತಿನಿಧಿ’ಗೆ ಅವಕಾಶ ಕಲ್ಪಿಸಲಾಯಿತು.