ಬನಹಟ್ಟಿಯ ನೀಲಕಂಠೇಶ್ವರ ಮಠದಲ್ಲಿ ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘ ಮತ್ತು ಶ್ರೀ ನೀಲಕಂಠೇಶ್ವರ ವಿದ್ಯುತ್ ಮಗ್ಗಗಳ ಸಹಾಕಾರಿ ಸಮಘದ ಆಶ್ರಯದಲ್ಲಿ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನೇಕಾರರ ನೆಮ್ಮದಿಯ ಬದುಕಿಗೆ ಪ್ರಮಾಣಿಕ ಪ್ರಯತ್ನ
ರಬಕವಿ-ಬನಹಟ್ಟಿ,ಅ13:: ನೇಕಾರರು ಎದುರಿಸುತ್ತಿರುವ ಸಂಕಷ್ಟದಿಂದ ಅವರನ್ನು ಪಾರು ಮಾಡುವುದರ ಜೊತೆಗೆ ನೇಕಾರರ ನೆಮ್ಮದಿಯ ಬದುಕಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಅವರು ನಗರದ ನೀಲಕಂಠೇಶ್ವರ ಮಠದಲ್ಲಿ ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘ ಮತ್ತು ಶ್ರೀ ನೀಲಕಂಠೇಶ್ವರ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಆಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನೇಕಾರಿಕೆಗೆ ಸಂಬಂದಿಸಿದಂತ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆ ಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕುರುಹಿನಶೆಟ್ಟಿ ಸಮಾಜದ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡತ್ತೇನೆ. ನಿಮ್ಮ ಎಲ್ಲ ಕಷ್ಟ ಸುಖಗಳಲ್ಲಿ ನಾನು ಕೂಡಾ ಭಾಗಿಯಾಗುತ್ತೇನೆ. ಕೋವಿಡ್‍ನಿಂದಾಗಿ ನಿಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಧ್ಯಕ್ಕೆ ಆಗುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಮೊದಲ ಆದ್ಯತೆಯಾಗಿ ತಮ್ಮ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾವೇರಿ ಹ್ಯಾಂಡಲೂಮ್‍ನ ನಿದೇರ್ಶಕ ಆನಂದ ಕಂಪು ಮಾತನಾಡಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಮಹಾಲಿಂಗಯ್ಯ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಮಹಾದೇವಪ್ಪ ಆಸಂಗಿ ವಹಿಸಿದ್ದರು. ವೈಷ್ಣವಿ ಬಾಗೇವಾಡಿ, ಸುರೇಶ ಒಂಟಗೂಡಿ, ರಾಜು ಅಂಬಲಿ ವೇದಿಕೆ ಮೇಲಿದ್ದರು.
ಬಸವರಾಜ ಗಿಡದಾನಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಸುಭಾಸ ಗಿರಿಸಾಗರ, ಈಶ್ವರ ಪಟಗಂಡಿ, ಚನಮಲ್ಲಪ್ಪ ಸಣಪೇಟೆ, ಮಳೆಪ್ಪ ದೊಡಮನಿ, ಈರಣ್ಣ ಚಿಂಚಖಂಡಿ, ಮಹಾದೇವ ಬಾಡಗಂಡಿ, ಆನಂದ ಬಾಡಗಂಡಿ, ವಿಶ್ವನಾಥ ಬಿಳ್ಳೂರ, ಪ್ರಕಾಶ ಆಸಂಗಿ, ಮಲ್ಲು ಶಿರೋಳ, ಡಾ. ಶ್ರೀಶೈಲ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.
ಕಾಡು ಕಲಬುರ್ಗಿ ಸ್ವಾಗತಿಸಿದರು. ಪ್ರಕಾಶ ಕುಂಚನೂರ ನಿರೂಪಿಸಿದರು. ಬಸವರಾಜ ಗಿಡದಾನಪ್ಪಗೋಳ ವಂದಿಸಿದರು.

Social Plugin