ಟ್ರ್ಯಾಕ್ಟರ್‍ಗಳಿಂದ ಶಬ್ದ ಮಾಲಿನ್ಯ: ಜನತೆಗೆ ಕಿರುಕುಳ
ರಬಕವಿ-ಬನಹಟ್ಟಿ,ಅ26: ಸದ್ಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿರುವ ಹಿನ್ನಲೆ ದಿನಂಪ್ರತಿ ನೂರಾರು ಟ್ರ್ಯಾಕ್ಟರ್‍ಗಳು ಕಬ್ಬಿನ ಟ್ರ್ಯಾಲಿಗಲೊಂದಿಗೆ ರಸ್ತೆಗಳಿಯುತ್ತಿವೆ. ಈ ಸಂದರ್ಭ ಕರ್ಕಶ ಶಬ್ದದಿಂದ ಜನರಿಗೆ ಆಗುವ ತೊಂದರೆ ತಪ್ಪಿಸಲು ಆಯಾ ಗ್ರಾಮ ಪಂಚಾಯ್ತಿ, ಪೊಲೀಸರು ಹೀಗೆ ಸರ್ಕಾರಿ ಇಲಾಖೆಗಳು ದಂಡ ವಿಧಿಸುತ್ತಿದ್ದರೂ ಕಬ್ಬು ತುಂಬಿದ ಟ್ರ್ಯಾಕ್ಟರ್‍ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಹೋಗುವದು ನಿಂತಿಲ್ಲ.
ಹಾಡಿನ ಸದ್ದಿನಿಂದಾಗಿಯೇ ಹಲವಾರು ರಸ್ತೆ ಅವಘಡಗಳಾಗಿರುವ ಉದಾಹರಣೆಗಳಿವೆ. ಕಳೆದ ವಾರದಿಂದ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಅಂಬ್ಯುಲೆನ್ಸ್ ಸೇರಿದಂತೆ ಇತರೆ ತುರ್ತು ಸೌಲಭ್ಯಗಳಿಗೆ ಇದೇ ಟ್ರ್ಯಾಕ್ಟರ್‍ಗಳಿಂದ ಸಮಸ್ಯೆ ಎದುರಿಸುವಲ್ಲಿ ಕಾರಣವಾಗಿದೆ.
ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಆದೇಶದೊಂದಿಗೆ ಶಬ್ದ ಮಾಲಿನ್ಯದಿಂದ ಜನತೆಗೆ ಕಿರುಕುಳ ಉಂಟು ಮಾಡುವ ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳಿಗೆ ದಂಡದೊಂದಿಗೆ ಯೋಗ್ಯ ಕ್ರಮ ಜರುಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.