ಗಮನ ಸೆಳೆದ ದಸರಾ ಗೊಂಬೆ ಪ್ರದರ್ಶನ
ರಬಕವಿ-ಬನಹಟ್ಟಿ,ಅ27: ಸ್ಥಳೀಯ ವಂದನಾ ಮೋಹನ ಪತ್ತಾರ ಅವರ ಮನೆಯಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ನಿರ್ಮಾಣ ಮಾಡಲಾದ ಗೊಂಬೆಗಳ ಪ್ರದರ್ಶನ ಸಾರ್ವಜನಿಕರ ಗಮನ ಸಳೆಯಿತು.
ವೈವಿಧ್ಯಮಯವಾದ ಗೊಂಬೆಗಳು ಆಕರ್ಷಕವಾಗಿ ಜೋಡಿಸಿಟ್ಟಿದ್ದು, ಅದರಲ್ಲಿ ಚನ್ನಪ್ಪಟ್ಟಣದ ಗೊಂಬೆಗಳು, ಮೈಸೂರ ದಸರಾ ಮೆರವಣಿಗೆಯ ಗೊಂಬೆಗಳು, ಶಿವ ಪಾರ್ವತಿ, ನವದುರ್ಗಾ ಮಾತೆಯರ ಗೊಂಬೆಗಳು ಗಮನ ಸೆಳೆದವು.
ಮನೆಯವರಾದ ಗೀತಾ, ಕಲಾ, ಶ್ರುತಿ, ಸ್ನೇಹಾ, ಅನ್ನಪೂರ್ಣಾ, ಸಾನ್ವಿ ಈ ಗೊಂಬೆಗಳಿನ್ನು ಒಂಭತ್ತು ದಿನಗಳ ಕಾಲ ಒಂದೊಂದು ರೀತಿಯಲ್ಲಿ ಜೋಡಿಸಿರುತ್ತಾರೆ.

Social Plugin