*ಸ್ವಾತಿ ಮಳೆ ಬರುತ್ತೆ. ಸ್ವಾತಿ ಮಳೆಯ ವಿಶೇಷತೆ ಗೊತ್ತಾ ?*
ನಮ್ಮ ಪೂರ್ವಜರು ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಲು ಸ್ವಾತಿ ಮಳೆಯ ನೀರನ್ನು ಉಪಯೋಗಿಸುತ್ತಿದ್ದರು. ಈ ರೀತಿ ಸ್ವಾತಿ ಮಳೆಯ ನೀರಿನಿಂದ ಹೆಪ್ಪು ಹಾಕಿದ ಮೊಸರನ್ನು ನಮ್ಮ ಜನರು ಬಳಸುತ್ತಿದ್ದರು. ಮತ್ತು ಮುಂದಿನ ವರ್ಷ ಬರೋ ಸ್ವಾತಿ ಮಳೆವರೆಗೂ ಈ ಮಳೆಯಿಂದ ಮಾಡಿದ ಮೊಸರನ್ನು ಸಂರಕ್ಷಿಸಿ ಹೆಪ್ಪು ಹಾಕಲು ಉಪಯೋಗಿಸುತ್ತಿದ್ದರು. ಸ್ವಾತಿ ಮಳೆಯ ನೀರಿನಲ್ಲಿ ಔಷದೀಯ ಗುಣ ಇದೆ. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿ ನಮ್ಮ ಪೂರ್ವಜರು ತಾವು ಬೆಳೆದ ಬೆಳೆಗಳಿಗೆ ರೋಗಬಂದರೆ ಬೆಳೆಗಳಿಗೆ ಬಂದ ರೋಗವನ್ನು ನಿಯಂತ್ರಣ ಮಾಡಲು ಔಷದಿಗೆ ಸ್ವಾತಿ ಮಳೆಯ ನೀರನ್ನು ಬಳಸುತ್ತಿದ್ದರು. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿ ಇಟ್ಟರೆ ಈ ನೀರು ಎಷ್ಟು ವರ್ಷ ಆದರೂ ಈ ನೀರಿನಲ್ಲಿ ಹುಳಗಳು ಆಗುವುದಿಲ್ಲ ಮತ್ತು ನೀರು ಕೆಡುವುದಿಲ್ಲ. ಆದ್ದರಿಂದ ನಮ್ಮ ಪೂರ್ವಜರು ಸ್ವಾತಿ ಮಳೆ ಯ ನೀರನ್ನು ಸಂರಕ್ಷಿಸಿ ಇಡುತ್ತಿದ್ದರು. ಸ್ವಾತಿ ಮಳೆಯು ಬರುವ ದಿನಗಳಲ್ಲಿ ನಮ್ಮ ಪೂರ್ವಜರು ತಮ್ಮ ಮನೆಯಲ್ಲಿ ಇದ್ದ ರೇಷ್ಮೆ ವಸ್ತ್ರ ಮತ್ತು ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಹಾಕುತ್ತಿದ್ದರು ಯಾಕೆ ಅಂದರೆ ಈ ಸ್ವಾತಿ ಮಳೆಯು ಬರುವ ದಿನಗಳಲ್ಲಿ ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಹಾಕಿದರೆ ರೇಷ್ಮೆ ಸೀರೆಗಳಿಗೆ ಹುಳಗಳು ಬರುತ್ತ ಇರಲಿಲ್ಲ ಮತ್ತು ರೇಷ್ಮೆ ಸೀರೆಗಳು ಬೇಗ ಹಾಳಾಗುತ್ತಿರಲಿಲ್ಲ.
😊 ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಲು ಅಥವಾ ಹೆಪ್ಪು ಹಾಕಲು ಮಜ್ಜಿಗೆ ಬಳಸುವುದು ಪ್ರಶಸ್ತವಾಗಿದ್ದು ( ಉತ್ತಮವಾದ , ಶ್ರೇಷ್ಠವಾದ ). ಸ್ವಾತಿ ಮಳೆಯ ನೀರು , ನಿಂಬೆಹಣ್ಣಿನ ರಸ ಮುಂತಾದ ಹುಳಿ ಪದಾರ್ಥಗಳನ್ನು ಬಳಸಿ ಮೊಸರು ಮಾಡುವ ಪದ್ಧತಿಯೂ ರೂಢಿಯಲ್ಲಿದೆ . ಹಳ್ಳಿಗಳಲ್ಲಿ ಜನರು ಮಾತಾಡಿಕೊಳ್ಳುತ್ತಾ ಇರುತ್ತಾರೆ ಸ್ವಾತಿ ಮತ್ತು ವಿಶಾಖ ಮಳೆ ಬಂದರೆ ಬೆಳೆಗಳಿಗೆ ರೋಗ ಬರುವುದಿಲ್ಲ ಮತ್ತು ಬೆಳೆಗಳಿಗೆ ಬಂದ ರೋಗ ಹೋಗುತ್ತದೆ ಅಂತ. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆ , ತಾಮ್ರದ ಬಿಂದಿಗೆಯಲ್ಲಿ ಸಂಗ್ರಹಿಸಿ ಮತ್ತು ನಮ್ಮ ದೇಸಿ ಹಸುವಿನ ಹಾಲಿನಿಂದ ಮಜ್ಜಿಗೆ ಮಾಡಿ ಮಜ್ಜಿಗೆಯನ್ನು ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ದಿನ ಇಟ್ಟು ಸ್ವಾತಿ ನೀರು ಮತ್ತು ತಾಮ್ರದ ಬಿಂದಿಗೆಯಲ್ಲಿ ಇಟ್ಟ ಹುಳಿ ಮಜ್ಜಿಗೆಯನ್ನು ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಬೆಳೆಗಳಿಗೆ ಬಂದ ರೋಗವನ್ನು ನಿಯಂತ್ರಣ ಮಾಡುತ್ತದೆ. ಹಿಂದಿನ ಕಾಲದ ಅಜ್ಜಿಯಂದಿರು , ತಿಳಿದ ಜನರು ಹೇಳುತ್ತಿದ್ದರು ಮನೆಯಲ್ಲಿ ಹುಳಿ ಮಜ್ಜಿಗೆ ಇದ್ದರೆ ಹುಳಿ ಮಜ್ಜಿಗೆಯನ್ನು ಕರಿಬೇವು ಮರಕ್ಕೆ ಹಾಕಿ ಅಥವಾ ಸಿಂಪಡಿಸಿ ಅಂತ ಯಾಕೆಂದರೆ ಮಜ್ಜಿಗೆಯಲ್ಲಿ ಗಿಡಗಳಿಗೆ ಬರುವ ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಇದೆ
ಈ ಸಲದ ಸ್ವಾತಿ ಮಳೆ ಅಕ್ಟೋಬರ್ 23 ರಿಂದ ಪ್ರಾರಂಭವಾಗಿ ನವೆಂಬರ್ 5 ರವರೆಗೆ ಇರುತ್ತದೆ.

Social Plugin