ಬನಹಟ್ಟಿಯ ಜವಳಿ ಉದ್ಯಮಿ ಮಲ್ಲಿಕಾರ್ಜುನ ಬಾಣಕಾರ ಬಿಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರದಲ್ಲಿರುವದು.
ಬಿಡಿಸಿಸಿ ಬ್ಯಾಂಕ್ ಚುನಾವಣೆ
ನೇಕಾರ ಕ್ಷೇತ್ರದಿಂದ ಬಿರುಸಿನ ಪ್ರಚಾರ
ರಬಕವಿ-ಬನಹಟ್ಟಿ,ಅ13: ಬಿಡಿಸಿಸಿ ಬ್ಯಾಂಕ್‍ನ ಚುನಾವಣೆ ದಿನಾಂಕ ಪ್ರಕಟಗೊಂಡ ಹಿನ್ನಲೆ ನೇಕಾರ ಕ್ಷೇತ್ರದಿಂದ ಹಾಲಿ ಸದಸ್ಯ ಡಾ. ಎಂ.ಎಸ್. ದಡ್ಡೇನವರ ಹಾಗು ನೇಕಾರ ಧುರೀಣ ಮಲ್ಲಿಕಾರ್ಜುನ ಬಾಣಕಾರ ಅವರಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ.
ಇನ್ನೂ ನಾಮಪತ್ರ ಸಲ್ಲಿಸದಿದ್ದರೂ ಬಿಜೆಪಿ ಬೆಂಬಲಿತವಾಗಿ ಮಲ್ಲಿಕಾರ್ಜುನ ಬಾಣಕಾರ ಹಾಗು ಕಾಂಗ್ರೆಸ್ ಬೆಂಬಲಿತವಾಗಿ ಡಾ. ಎಂ.ಎಸ್. ದಡ್ಡೇನವರ ಕಣಕ್ಕಿಳಿಯಲಿದ್ದಾರೆಂದು ಪಕ್ಷಗಳ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಇಡೀ ಬಾಗಲಕೋಟೆ ಜಿಲ್ಲೆಯ ಎಲ್ಲ ಪಟ್ಟಣ ಹಾಗು ಗ್ರಾಮಗಳಲ್ಲಿರುವ ನೇಕಾರ ಸಂಘಗಳಿಗೆ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಪ್ರಸಕ್ತ ಚುನಾವಣೆಗೆ 53 ನೇಕಾರ ಸಂಘಗಳಿಂದ ಮತದಾನಕ್ಕೆ `ಪ್ರತಿನಿಧಿ’ಗಳ ಆಯ್ಕೆ ಬಹುತೇಕ ಮುಕ್ತಾಯಗೊಂಡಿದೆ. ಇನ್ನುಳಿದ 37 ನೇಕಾರ ಸಂಘಗಳಿಂದ ಹಲವಾರು ಕಾನೂನು ತೊಡಕುಗಳ ಕಾರಣ ಸಮಸ್ಯೆಯಿಂದಾಗಿ ಮತದಾನ ಹಕ್ಕಿಗಾಗಿ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬನಹಟ್ಟಿ-10, ರಬಕವಿ-05, ಕಮತಗಿ-8, ಇಳಕಲ್-8, ಅಮೀನಗಡ-5, ಸುಳೇಬಾವಿ-4, ನಾಗರಾಳ-2 ಹಾಗು ಕಲಾದಗಿ, ಮಲ್ಲಾಪುರ, ಶಿರೂರ, ಗುಳೇದಗುಡ್ಡ, ಕೋಡಿಹಾಳ, ಹುನ್ನೂರ, ಚಿಮ್ಮಡ, ಹುಲ್ಯಾಳ, ಮಹಾಲಿಂಗಪೂರ, ಆಸಂಗಿ, ಹೊಸೂರ, ನಾವಲಗಿ ಗ್ರಾಮಗಳಲ್ಲಿ ತಲಾ 1 ಮತದಾರರಿದ್ದಾರೆ.

Social Plugin