ತೇರದಾಳ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಆದಿಶಕ್ತಿ ತರುಣ ಮಂಡಳಿಯ 23ನೇ ವಾರ್ಷಿಕೋತ್ಸವ ಹಾಗೂ ದಸರಾ ಉತ್ಸವ ನಿಮಿತ್ಯ ಆದಿಶಕ್ತಿದೇವಿಯ ಪ್ರತಿಷ್ಠಾಪನೆ ಸಂದರ್ಭದಲ್ಲಿ ಆದಿಶಕ್ತಿ ದೇವಿ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ತರಲಾಯಿತು.

ಆದಿಶಕ್ತಿ ಭವ್ಯ ಮೆರವಣಿಗೆ : ತೇರದಾಳದಲ್ಲಿ ದಸರಾ ಉತ್ಸವಕ್ಕೆ ಚಾಲನೆ

ತೇರದಾಳ :  ಪಟ್ಟಣದ ಕಲ್ಲಟ್ಟಿ ಗಲ್ಲಿಯ ಆದಿಶಕ್ತಿ ತರುಣ ಮಂಡಳಿಯ 23ನೇ ವಾರ್ಷಿಕೋತ್ಸವ ಹಾಗೂ ದಸರಾ ಉತ್ಸವ ನಿಮಿತ್ಯ ಆದಿಶಕ್ತಿದೇವಿಯ ಪ್ರತಿಷ್ಠಾಪನೆ ಸಂದರ್ಭದಲ್ಲಿ ಆದಿಶಕ್ತಿ ದೇವಿ ಮೂರ್ತಿಯನ್ನು ಪಟ್ಟಣದ ಚಾವಡಿಯಿಂದ ಶ್ರೀಪ್ರಭುದೇವರ ಅಗಸಿ ಬಾಗಿಲು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಂಭ್ರಮ ಸಡಗರದಿಂದ ಕಲ್ಲಟ್ಟಿಗೆ ತರಲಾಯಿತು.

   ಮಂಡಳಿಯ ಸರ್ವ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ಶ್ರೀಆದಿಶಕ್ತಿ ದೇವಿ ಮೂರ್ತಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಸಂಸ್ಕೃತಿಯ ಪ್ರತೀಕವಾದ ದಸರಾ ಹಬ್ಬವು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿಯನ್ನು ದಯಪಾಲಿಸಲೆಂದು ನಾಡಿನ ಜನತೆಗೆ ಶುಭ ಹಾರೈಸಿದರು. 

     ಶ್ರೀಪ್ರಭುಲಿಂಗೇಶ್ವರ ಕರಡಿ ಮೇಳ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಸಂಘದ ಭರತ ಕಾಂಬಳೆ ಹಲಗಿ ಮೇಳ ವಾದ್ಯಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪ್ರತಿವರ್ಷದಂತೆ ಈ ವರ್ಷ ಕೊರೊನಾ ಸೋಂಕು ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಮಾರ್ಗದರ್ಶಿ ಸೂತ್ರದಂತೆ ಸರಳವಾಗಿ ದಸರಾವನ್ನು ಆಚರಿಸುವಂತೆ ಸರಕಾರದ ಆದೇಶದ ಮೇರಗೆ ಸಾಂಪ್ರದಾಯಿಕವಾಗಿ ವೇದಿಕೆಯಲ್ಲಿ ಶ್ರೀಆದಿಶಕ್ತಿದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. 

   ಆದಿಶಕ್ತಿ ತರುಣ ಮಂಡಳಿಯ ಅಧ್ಯಕ್ಷ ಶಿವಾನಂದ ಹೊಸಮನಿ, ಕಾಡು ಖವಾಸಿ, ಬಸವರಾಜ ಮುದಕನ್ನವರ, ನಿಂಗಪ್ಪ ನಿಲಜಗಿ, ರಾಜು ಹೊಸಮನಿ, ಬಸವರಾಜ ನಿರ್ವಾಣಿ, ನಿಂಗಪ್ಪ ಮಲಾಬದಿ, ಪರಪ್ಪ ಅಥಣಿ, ಅಲ್ಲಪ್ಪ ಇಂಗಳಗಿ, ದಾನಪ್ಪ ಕರೋಲಿ, ನಾಗಪ್ಪ ಹೊಸಮನಿ, ಮಲ್ಲಪ್ಪ ಪುರಾಣಿಕ, ಕೇದಾರಿ ಕುಡಚಿ, ಸಂಗಮೇಶ ನಿವರಗಿ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಆದಿಶಕ್ತಿ ತರುಣ ಮಂಡಳಿಯ ಪದಾಧಿಕಾರಿಗಳು, ಯುವಕರು ಮೆರವಣಿಗೆಯಲ್ಲಿ ಭಾಗವಹಿದ್ದರು. ದಾರಿಯುದ್ದಕ್ಕೂ ಮಹಿಳೆಯರು ನೀರು ಹಾಕಿ ಸಕ್ಕರಿ ಪುಠಾಣಿ ನೈವಿದ್ಯೆ ಸಲ್ಲಿಸಿದರು. 

 -  ಶ್ರೀವೆಂಕಟೇಶ್ವರ ರಥೋತ್ಸವ : ರವಿವಾರದಂದು ಶ್ರೀವೆಂಕಟೇಶ್ವರ ರಥೋತ್ಸವ ಜರುಗಲಿದೆ ಎಂದು ವೆಂಕಟೇಶ್ವರ ದೇವಸ್ಥಾನದ ಟ್ರಸ್ಟಿಗಳು ತಿಳಿಸಿದ್ದಾರೆ.