ಕೃಷ್ಣಾ ನದಿಯ ನೀರು ಭಾರಿ ಇಳಿಮುಖಗೊಂಡಿರುವದು.

ಮಳೆರಾಯ ಶಾಂತ: ಕೃಷ್ಣಾ ನದಿ ನೀರು ಇಳಿಮುಖ
*22 ಗೇಟ್‍ಗಳ ಮೂಲಕ ನೀರು ಹೊರಕ್ಕೆ
ರಬಕವಿ-ಬನಹಟ್ಟಿ,ಅ18: ಉತ್ತರ ಕರ್ನಾಟಕ ಹಾಗು ದಕ್ಷಿಣ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಕೃಷ್ಣಾ ನದಿಯ ನೀರಿನ ಹರಿವು ಪ್ರಮಾಣ ಭಾರಿ ಇಳಿಮುಖಗೊಂಡಿದೆ.
ಹಿಪ್ಪರಗಿ ಜಲಾಶಯದ ಹಿನ್ನೀರು 1.8 ಲಕ್ಷ ಕ್ಯುಸೆಕ್‍ನಲ್ಲಿ ಹರಿಯುತ್ತಿತ್ತು. ರವಿವಾರ 1.04 ಲಕ್ಷ ಕ್ಯುಸೆಕ್‍ಗೆ ಇಳಿಮುಖಗೊಂಡು ಕೃಷ್ಣೆ ಶಾಂತವಾಗಿ ಹರಿಯುತ್ತಿದ್ದಾಳೆ.
ನದಿ ಪಾತ್ರದ ಜನ ಪ್ರವಾಹದ ಭೀತಿ ಎದುರಿಸುತ್ತಿದ್ದರು. ಇದೀಗ ಮಳೆ ಶಾಂತಗೊಂಡಿರುವ ಕಾರಣ ರೈತರು ನಿಟ್ಟುಸಿರು ಬಿಡುವಲ್ಲಿ ಕಾರಣರಾಗಿದ್ದಾರೆ.
ಹಿಪ್ಪರಗಿ ಜಲಾಶಯದಿಂದ ಎಲ್ಲ 22 ಗೇಟ್‍ಗಳ ಮೂಲಕ ನೀರನ್ನು ಯಾವದೇ ರೀತಿ ಹಿಡಿದಿಟ್ಟುಕೊಳ್ಳದೆ ಬಂದಷ್ಟೇ ನೀರನ್ನು ಹೊರಹಾಕಲಾಗುತ್ತಿದೆ. ನದಿ ನೀರು ಆಗಮನದಲ್ಲಿ ಭಾರಿ ಇಳಿಮುಖ ಕಂಡಿರುವ ಹಿನ್ನಲೆ ಮಂಗಳವಾರದಿಂದ ಜಲಾಶಯದ ಕೆಲ ಗೇಟ್‍ಗಳನ್ನು ಮುಚ್ಚುವ ಅಂದಾಜಿದೆ.