ಬಂಡಾಯದ ಬೇಗುದಿಯಲ್ಲಿ ಬೆಂದ ಬಿಜೆಪಿ
*ಮೌನಕ್ಕೆ ಜಾರಿದ ಕಾಂಗ್ರೆಸ್ *ಚುನಾವಣೆ ನಂತರ ರಾಜಕೀಯ ದ್ರುವೀಕರಣ ಸಾಧ್ಯ
ರಬಕವಿ-ಬನಹಟ್ಟಿ,ಅ17: ಸಹಕಾರಿ ಕ್ಷೇತ್ರದ ಚುನಾವಣೆಯು ತೇರದಾಳ ವಿಧಾನಸಭಾ ಕ್ಷೇತ್ರದ ರಾಜಕೀಯ ಅಖಾಡದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡುವಲ್ಲಿ ಕಾರಣವಾಗಿದೆ.
ತೀವ್ರ ಪೈಪೋಟಿ ಸೃಷ್ಟಿಸಿರುವ ಬಿಡಿಸಿಸಿ ಬ್ಯಾಂಕ್‍ನ ಚುನಾವಣಾ ಅಖಾಡ ರಂಗೇರುತ್ತಿದ್ದು, ಬಿಜೆಪಿ ಪಕ್ಷದಲ್ಲಿ ರಬಕವಿ-ಬನಹಟ್ಟಿ ವಿಭಾಗದ ಪಿಕೆಪಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಬಲವಾಗಿ ತಟ್ಟಿದೆ.
ತಾಲೂಕಿನ ಜನರ ಗಮನ ಸೆಳೆದಿರುವ ಪಿಕೆಪಿಎಸ್ ವಿಭಾಗದ ಚುನಾವಣೆಯಲ್ಲಿ ಹಾಲಿ ಶಾಸಕ ಸಿದ್ದು ಸವದಿ ವಿರುದ್ಧ ತಂತ್ರಗಾರಿಕೆ ಹೆಣೆದು ಬಿಡಿಸಿಸಿ ಬ್ಯಾಂಕ್‍ನ ಹಾಲಿ ಸದಸ್ಯ ಭೀಮಶಿ ಮಗದುಮ್ ಮತ್ತೊಮ್ಮೆ ಕಣಕ್ಕಿಳಿಯುವದಾಗಿ ಪ್ರಕಟಣೆ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರಲ್ಲದೆ ಒಂದೇ ಪಕ್ಷದ ಇಬ್ಬರು ಪ್ರಮುಖರು ಕಣದಲ್ಲಿರುವದು ಖಚಿತವಾಗಿದೆ.
ಮೌನಕ್ಕೆ ಜಾರಿದ ಕಾಂಗ್ರೆಸ್: ತಾಲೂಕಾ ವ್ಯಾಪ್ತಿಗೆ ಮೀಸಲಿರುವ ಪಿಕೆಪಿಎಸ್ ವಿಭಾಗದಿಂದ 26 ಸೊಸೈಟಿಗಳು ಮತದಾನದ ಹಕ್ಕು ಪಡೆದಿವೆ. ಇದರಲ್ಲಿ 23 ಸೊಸೈಟಿಗಳು ಬಿಜೆಪಿ ಬೆಂಬಲಿತವಾಗಿದ್ದರೆ, 3 ಕಾಂಗ್ರೆಸ್‍ನ ಬೆಂಬಲದಿಂದ ಕೂಡಿರುವ ಕಾರಣ ಕಾಂಗ್ರೆಸ್ ಪಕ್ಷದಿಂದ ಯಾವದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಸದ್ಯದ ವಿದ್ಯಮಾನದಲ್ಲಿ ಭೀಮಶಿ ಮಗದುಮ್ ಕಣಕ್ಕಿಳಿದರೆ ಶಾಸಕ ಸಿದ್ದು ಸವದಿಯವರಿಗೆ ಗೆಲುವು ಕಷ್ಟಕರ ನಿಶ್ಚಿತವಾಗಿದೆ.
ಭೀಮಶಿ ಮಗದುಮ್ ಮಾತನಾಡಿ, ನಾನು ಕಣಕ್ಕಿಳಿಯುವದು ನಿಶ್ಚಿತ. ಸೋಲು ಗೆಲುವುಇನ ಲೆಕ್ಕಾಚಾರ ನನ್ನದಲ್ಲ. ಪ್ರಾಮಾಣಿಕತೆ ಹಾಗು ಪಕ್ಷ ನಿಷ್ಠೆಯಿಂದ ಯಾವ ಹಣಬಲ ಅಧಿಕಾರವು ಸಾಮಾನ್ಯ ಕಾರ್ಯಕರ್ತನನ್ನು ತಡೆಯಲಾಗುವದಿಲ್ಲ ಎಂಬುದಾಗಿದೆ. ಸೋಲಾದರೆ ಅಧಿಕಾರ, ಹಣ, ಪ್ರಭಾವ ಒಂದಿದ್ದರೆ ಯಾರನ್ನಾದರೂ ತುಳಿಯಬಹುದು ಎಂಬ ಸ್ಪಷ್ಟ ಸಂದೇಶ ಒಟ್ಟಾರೆ ನನ್ನ ಸ್ಪರ್ಧೆ ಖಚಿತವೆಂದು ತಿಳಿಸಿದರು.
ರಾಜಕೀಯ ದ್ರುವೀಕರಣ?: ಕಾಂಗ್ರೆಸ್ ಪಕ್ಷ ಮೌನಕ್ಕೆ ಜಾರಿದ್ದು, ಬಿಡಿಸಿಸಿ ಬ್ಯಾಂಕ್ ಚುನಾವಣೆ ನಂತರ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ದ್ರುವೀಕರಣ ನಡೆಯಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಒಟ್ಟಾರೆ ಸಹಕಾರಿ ಚುನಾವಣೆಯು ರಾಜಕೀಯವಾಗಿ ರಂಗೇರುವ ಮೂಲಕ ಬಿಜೆಪಿ ಪಕ್ಷವನ್ನು ಬಂಡಾಯದ ಬೇಗುದಿಯಲ್ಲಿ ಸಿಲುಕಿಸಿದ್ದಂತು ಸತ್ಯ.

Social Plugin