ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಯದ ಆವರಣದಲ್ಲಿ ಸ್ವರ ಸಾಮ್ರಾಟ ಡಾ.ಎಸ್‍ಪಿಬಿ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಹಾಗೂ “ಗಾನ ನಮನ” ಕಾರ್ಯಕ್ರಮ ನಡೆಯಿತು.

ಯಲ್ಲಟ್ಟಿಯಲ್ಲಿ ಎಸ್‍ಪಿಬಿಯವರಿಗೆ ಶೃದ್ಧಾಂಜಲಿ-ಗಾನ ನಮನ
ಸಿರಿಕಂಠದ ಅತ್ಯದ್ಭುತ ಗಾಯಕ ಡಾ. ಎಸ್‍ಪಿಬಿ- ಚಿಮ್ಮಡ ಶ್ರೀ ಬಣ್ಣನೆ
ರಬಕವಿ-ಬನಹಟ್ಟಿ,ಅ11: ಹಾನಗಲ್ ಕುಮಾರ ಶಿವಯೋಗಿಯವರ ಗೀತೆಗಳನ್ನು ಹಾಡಿದ, 16ಭಾಷೆಗಳಲ್ಲಿ, 41ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಾನಪ್ರಿಯರ, ಅಭಿಮಾನಿಗಳ ಹೃದಯವನ್ನು ಗೆದ್ದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ನವರಸಗಳನ್ನು ಹೊರಹೊಮ್ಮಿಸಿ ಅತ್ಯದ್ಭುತ ಗಾಯಕರಾಗಿದ್ದರು. ಸಂಗೀತ ನಿರ್ದೇಶಕರಾಗಿ, ನಟರಾಗಿಯೂ ಸೇವೆಗೈದ ಎಸ್‍ಪಿಬಿ ಅಪ್ರತಿಮ ಅದ್ಭುತ ಸಾಧಕರೆಂದು ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಗೌರವಾಧ್ಯಕ್ಷರು, ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಬಣ್ಣಿಸಿದರು.
ರಬಕವಿ-ಬನಹಟ್ಟಿ ತಾಲೂಕಿನ, ತೇರದಾಳ ಮತಕ್ಷೇತ್ರದ ಯಲ್ಲಟ್ಟಿ ಗ್ರಾಮದ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಯದ ಆವರಣದಲ್ಲಿ ಕೊಣ್ಣೂರ ಕಾಲೇಜ್, ಕರ್ನಾಟಕ ಜಾನಪದ ಪರಿಷತ್ತು ತಾಲೂಕಾ ಘಟಕ, ವಲಯ ಘಟಕ ತೇರದಾಳ, ಮಹಾಲಿಂಗಪುರ ಮತ್ತು ಗೀತಪ್ರಭೆ ಕಲಾ ಕುಟುಂಬ ಅವರು ಹಮ್ಮಿಕೊಂಡಿದ್ದ ಸ್ವರ ಸಾಮ್ರಾಟ ಡಾ.ಎಸ್‍ಪಿಬಿ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಹಾಗೂ “ಗಾನ ನಮನ” ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಎಸ್‍ಪಿಬಿ ಮರೆಯಲಾಗದ ಮಾಣಿಕ್ಯ ಎಂದರು.
ಕೊಣ್ಣೂರ ಕಾಲೇಜಿನ ಸಂಸ್ಥಾಪಕರಾದ ಪೊ. ಬಸವರಾಜ ಕೊಣ್ಣೂರ ಅಧ್ಯಕ್ಷತೆ ವಹಿಸಿ, ಎಸ್‍ಪಿಬಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಾಲುಕಾ ಕಜಾಪ ಕೋಶಾಧ್ಯಕ್ಷರಾದ ಶ್ರೀ ಮಗಯ್ಯ ಸ್ವಾಮಿಗಳು ತೆಳಗಿನಮನಿ, ರೇವಣೇಶ ಹಿರೇಮಠ ನೇತೃತ್ವ ವಹಿಸಿದ್ದರು. ತೇರದಾಳ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ಪ್ರೊ. ಜಿ.ಎಸ್.ವಡಗಾಂವಿ, ಕೃಷಿ ಸಲಹೆಗಾರರಾದ ಮಹಾದೇವ ಕಟ್ಟಿ, ವಿಜಯಪುರ ಚೇತನ ಪಿಯು ಕಾಲೇಜಿನ ಸಂಸ್ಥಾಪಕರಾದ ಡಾ. ದಯಾನಂದ ದುಗತಿ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಕಜಾಪ ತಾಲೂಕಾ ಅಧ್ಯಕ್ಷ ಮ.ಕೃ.ಮೇಗಾಡಿ, ಮಹಾದೇವ ಕಟ್ಟಿ ಇದ್ದರು. ತೇರದಾಳ ವಲಯಾಧ್ಯಕ್ಷ ಗಂಗಾಧರ ಮೋಪಗಾರ ಸ್ವಾಗತಿಸಿ, ನಿರೂಪಿಸಿದರು. ರಂಗಸ್ವಾಮಿ ವಂದಿಸಿದರು.