ಭಾರಿ ಮಳೆಯಿಂದಾಗಿ ಬಾಳೆ ತೋಟದಲ್ಲಿ ನೀರು
ರಬಕವಿ-ಬನಹಟ್ಟಿ,ಅ12: ಶನಿವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಗದಾಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೆಳೆದ ಕಬ್ಬು, ಅರಿಸಿನ, ಬಾಳೆ, ತರಕಾರಿ, ಗೋವಿನ ಜೋಳದ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ಇದರಿಂದಾಗಿ ರೈತರಿಗೆ ಸಾಕಷ್ಟು ಹಾನಿಯಾಗಿದೆ.
ಸಮೀಪದ ಜಗದಾಳ ರಸ್ತೆಗೆ ಅಂಟಿಕೊಂಡಿರುವ ತೋಟದಲ್ಲಿರುವ ಹತ್ತಾರು ಎಕರೆಯಲ್ಲಿ ಬೆಳೆದ ಬಾಳೆ ಗಿಡಗಳು ನೀರಿನಲ್ಲಿ ನಿಂತಿವೆ. ಬಾಳೆ ಗಿಡಗಳ ಮಧ್ಯದಲ್ಲಿರುವ ಈರುಳ್ಳಿ ಕೂಡಾ ನೀರಿನಲ್ಲಿ ತೇಲಾಡುತ್ತಿವೆ. ಕೆಲವು ಕಡೆಗಳಲ್ಲಿ ಕಬ್ಬು ಸಂಪೂರ್ಣವಾಗಿ ಬಿದ್ದಿದೆ. ಅದೇ ರೀತಿಯಾಗಿ ವಿವಿಧ ಹೂವಿನ ಗಿಡಗಳಿಗೂ ಬಹಳಷ್ಟು ತೊಂದರೆಯಾಗಿದೆ.
ಲಾಕ್‍ಡೌನ್‍ನ್ನಿಂದಾಗಿ ಮೊದಲೆ ಸಮಸ್ಯೆಯಲ್ಲಿ ಸಿಲುಕಿದ್ದ ರೈತರು ಈಗ ಭಾರಿ ಮಳೆಯಿಂದಾಗಿ ರೈತರು ಹಾನಿಯನ್ನು ಅನುಭವಿಸುವಂತಾಗಿದೆ ಎಂದು ಸ್ಥಳೀಯ ರೈತರಾದ ಅಪ್ಪು ಪಾಟೀಲ, ಮಲ್ಲಪ್ಪ ಗೌಡಪ್ಪನವರ, ಸದಾಶಿವ ಬಂಗಿ ಪತ್ರಿಕೆಗೆ ತಿಳಿಸಿದರು.

Social Plugin