ರಬಕವಿ-ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೆ. ಯು. ಎಂ. ಫೌಂಡೇಶನ ವತಿಯಿಂದ 151ನೇ ಗಾಂಧಿ ಜಯಂತಿ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಉಚಿತ ಮಾಸ್ಕ ವಿತರಾಣಾ ಸಮಾರಂಭದಲ್ಲಿ ಮಾಸ್ಕ ವಿತರಿಸಲಾಯಿತು.
ಮಾಸ್ಕ್ ಧರಿಸಿ ಕೋವಿಡ್‍ನಿಂದ ಸುರಕ್ಷಿತವಾಗಿರಿ
ರಬಕವಿ-ಬನಹಟ್ಟಿ,11: ಮಾಸ್ಕ್ ಧರಿಸುವುದರ ಮೂಲಕ ಕೋವಿಡ್‍ನಿಂದ ಸುರಕ್ಷಿತವಾಗಿರಿ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ಹೇಳಿದರು.
ಅವರು ರಬಕವಿ-ಬನಹಟ್ಟಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೆ. ಯು. ಎಂ. ಫೌಂಡೇಶನ ವತಿಯಿಂದ 151ನೇ ಗಾಂಧಿ ಜಯಂತಿ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಉಚಿತ ಮಾಸ್ಕ ವಿತರಾಣಾ ಸಮಾರಂಭದಲ್ಲಿ ಮಾಸ್ಕ ವಿತರಿಸಿ ಮಾತನಾಡಿದರು.
ಸರಕಾರ ಕೋವಿಡ್ ನಿಯಂತ್ರಣಕ್ಕೆ ಅನೇಕ ಮಾರ್ಗ ಸೂಚಿಗಳನ್ನು ತಿಳಿಸಿದ್ದು ಅವುಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜೆ.ಯು. ಎಂ. ಫೌಂಡೇಶನನ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಜೆ. ಯು. ಮೊಹಮ್ಮದ, ವೈದ್ಯಾಧಿಕಾರಿ ಡಾ. ಎನ್. ಎಂ. ನಧಾಪ್, ಡಾ. ವಿ. ಆರ್. ಹುಡೇದಮನಿ, ವಾಯ್. ಎಸ್. ಧನಗರ, ಸಭಾನ ಮೊಘಲ, ಸವಿತಾ ಕುಲಕರ್ಣಿ, ಮುಜಾವರ, ಸಲಾವುದ್ದೀನ ಜಾಡವಾಲೆ ಸೇರಿದಂತೆ ಅನೇಕರು ಇದ್ದರು.

Social Plugin