ಬನಹಟ್ಟಿ ಜಗದಾಳ ರಸ್ತೆಯ ಗೌಡಪ್ಪನವರ ತೋಟದಲ್ಲಿ ಕೊಯ್ಲಿಗೆ ಬಂದ ಅಪಾರ ಪ್ರಮಾಣದ ಕಬ್ಬು ನೆಲಕ್ಕೆ ಉರಳಿರುವುದು.

ಕೊಯ್ಲಿಗೆ ಬಂದ ಕಬ್ಬು ನೆಲಕ್ಕೆ ಉರಳಿರುವುದು

ರಬಕವಿ-ಬನಹಟ್ಟಿ,ಅ15:ಜಗದಾಳ ರಸ್ತೆಯ ಗೌಡಪ್ಪನವರ ತೋಟದಲ್ಲಿಯ ಕೊಯ್ಲಿಗೆ ಬಂದ ಅಪಾರ ಪ್ರಮಾಣದ ಕಬ್ಬು ಮಳೆ ನೀರಿಗೆ ಆಹುತಿಯಾಗಿದೆ.

ಬುಧವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಈ ಭಾಗದಲ್ಲಿ ನೂರಾರು ಎಕರೆ ಭೂ ಪ್ರದೇಶದಲ್ಲಿ ಬೆಳೆದ ಕಬ್ಬು ನೆಲಕ್ಕೆ ಉರುಳಿದೆ. ಇದರಿಂದಾಗಿ ಅಪಾರ ಪ್ರಮಾಣದ ಕಬ್ಬು ನಾಶಗೊಂಡಿದ್ದು ರೈತರಿಗೆ ಬಹಳಷ್ಟು ಹಾನಿಯಾಗಿದೆ ಎಂದು ರೈತರಾದ ಸಿದ್ದು ಗೌಡಪ್ಪನವರ ತಿಳಿಸಿದರು.

ಸಕ್ಕರೆ ಕಾರ್ಖಾನೆ ಆರಂಭವಾದ ಕೂಡಲೇ ಹೋಗ ಬೇಕಾಗಿದ್ದು ಕಬ್ಬುಇದಾಗಿತ್ತು. ಆದರೆ ಈಗ ಕಬ್ಬು ನೆಲಕ್ಕೆ ಉರಳಿದ ಪರಿಣಾಮವಾಗಿ ಸಾಕಷ್ಟು ಹಾನಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಮುಂದಿನ ದಿನಗಳಲ್ಲಿ ಕಬ್ಬಿನ ಬೆಳೆಯ ರಕ್ಷಣೆ ಕುರಿತು ಮಾಹಿತಿ ನೀಡಬೇಕು. ಸರ್ಕಾರವೂ ಕೂಡಾ ಆದಷ್ಟು ಬೇಗನೆ ಬೆಳೆ ಹಾನಿಯ ಕುರಿತು ಸಮೀಕ್ಷೆಯನ್ನು ನಡೆಸಿ ಹಾನಿಗೊಳಗಾದ ರೈತರಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ಗೌಡಪ್ಪನವರ ತಿಳಿಸಿದರು.