ಬನಹಟ್ಟಿಯ ಹತ್ತಿರ ತೋಟದಲ್ಲಿ ಅಪಾರ ಪ್ರಮಾಣ ಜವಳು ನೀರು ಹಳ್ಳದಂತೆ ಹರಿಯುತ್ತಿರುವುದು.

ಕಬ್ಬಿನ ತೋಟದಿಂದ ಹಳ್ಳದಂತೆ ಹರಿದು ಬರುತ್ತಿರುವ ಜವುಳು ನೀರು

ರಬಕವಿ-ಬನಹಟ್ಟಿ,ಅ15: ತೋಟಗಳಲ್ಲಿ ಹರಿಯುತ್ತಿರುವ ಜವುಳು ನೀರಿನಿಂದ ಈ ಭಾಗದ ರೈತರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇಲ್ಲಿಯ ಅನೇಕ ತೋಟಗಳಿಂದ ಅಪಾರ ಪ್ರಮಾಣದ ಜವುಳು ನೀರು ಹರಿದು ಬರುತ್ತಿದೆ. ಈ ನೀರು ತೋಟಗಳಿಗೆ ನುಗ್ಗುತ್ತಿರುವುದರಿಂದ ಬೆಳೆಗಳಿಗೂ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಪತ್ರಿಕೆ ಗುರುವಾರ ಈ ಭಾಗದ ಅನೇಕ ತೋಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದು ಕಂಡು ಬಂದಿತು.

ಪ್ರಮುಖ ವಾಣಿಜ್ಯ ಬೆಳೆಗಳು ಸೇರಿದಂತೆ ತೋಟಗಾರಿಕೆ ಮತ್ತು ತರಕಾರಿ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ರೈತರು ತೋಟದೊಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅμÉ್ಟೂಂದು ಪ್ರಮಾಣದಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ತೋಟದ ಮಧ್ಯದಲ್ಲಿರುವ ಕೊಳವೆ ಬಾವಿಗಳಿಂದಲೂ ಅಪಾರ ಪ್ರಮಾಣದ ನೀರು ಹೊರ ಬರುತ್ತಿದೆ. ಬಾವಿಗಳು ಸಂಪೂರ್ಣವಾಗಿ ತುಂಬಿವೆ. ಇದು ಕೂಡಾ ಬೆಳೆಗಳಿಗೆ ಬಹಳಷ್ಟು ತೊಂದರೆಯನ್ನುಂಟು ಮಾಡುತ್ತಿದೆ ಎನ್ನುತ್ತಾರೆ ರೈತರಾದ ಅಪ್ಪು ಪಾಟೀಲ ಮತ್ತು ಶಿವು ಗುಂಡಿ. 

ತುಂಬಿದ ಕೆರೆ ರಸ್ತೆ: ಮಳೆಯಿಂದಾಗಿ ಮತ್ತು ಕೆರೆ ತುಂಬಿ ಹೆಚ್ಚಾದ ನೀರು ಕೆರೆ ರಸ್ತೆಯ ಮೇಲೆ ಹರಿಯತ್ತಿರುವುದರಿಂದ ಕೆರೆ ರಸ್ತೆಯ ಮೂಲಕ ಸಂಚರಿಸುತ್ತಿರುವ ಜನರಿಗೆ ತೊಂದರೆಯಾಗಿದೆ. 

ಬಿಡುವು ಕೊಟ್ಟ ಮಳೆ: ಗುರುವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಮಾತ್ರ ಇದ್ದು ಮಧ್ಯಾಹ್ನದ ನಂತರ ಮಳೆ ಬಿಡುವ ನೀಡಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ. ಮಳೆಯಿಂದಾಗಿ ಮಾರುಕಟ್ಟೆ ವಹಿವಾಟ ಕೂಡಾ ಸಂಪೂರ್ಣವಾಗಿ ಸ್ಥಬ್ದಗೊಂಡಿದೆ. ಎರಡು ದಿನಗಳಿಂದ ಗ್ರಾಹಕರು ಅಂಗಡಿಗಳಿಗೆ ಬರುತ್ತಿಲ್ಲ ಎಂದು ಕಿರಾಣಿ ವ್ಯಾಪಾರಸ್ಥ ಗೋಪಾಲ ಭಟ್ಟಡ ತಿಳಿಸಿದರು.