ಭಾರಿ ಮಳೆಗೆ ತುಂಬಿದ ಬಾಂದಾರ
ರಬಕವಿ-ಬನಹಟ್ಟಿ,ಅ12:ಸ್ಥಳೀಯ ಹಳೆಯ ನ್ಯಾಯಾಲಯದ ಹಿಂಭಾಗದಲ್ಲಿರುವ ಬಾಂದಾರ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ಬಾಂದಾರದ ಮುಂದಿರುವ ರಸ್ತೆಯು ಜಲಾವೃತಗೊಂಡಿದೆ. ಇದರಿಂದಾಗಿ ನಗರದ ಹೊರ ವಲಯದ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.
ಈ ಬಾಂದಾರದಲ್ಲಿ ಮೊದಲು ಸ್ವಲ್ಪ ಪ್ರಮಾಣದ ನೀರು ಹರಿಯುತ್ತಿದ್ದು, ಈಗ ಅದು ಅಪಾಯ ಮಟ್ಟದಿಂದ ಹರಿಯುತ್ತಿದೆ. ಸ್ವಲ್ಪ ನೀರಿನ ಪ್ರಮಾಣವಿದ್ದಾಗ ಸಾಕಷ್ಟು ಯುವಕರು ಮತ್ತು ಚಿಕ್ಕ ಮಕ್ಕಳು ಇಲ್ಲಿ ಈಜಾಡುತ್ತಾರೆ. ಈಗ ನೀರು ರಭಸವಾಗಿ ಹರಿಯುತ್ತಿರುವುದರಿಂದ ಮಕ್ಕಳನ್ನು ಬಾಂದಾರ ಸಮೀಪಕ್ಕೆ ಬಿಡದಂತೆ ಸುತ್ತ ಮುತ್ತಲಿನ ಮನೆಗಳ ಪಾಲಕರು ಗಮನ ನೀಡಬೇಕಾಗಿದೆ.
ಅದೇ ರೀತಿಯಾಗಿ ಮಹಿಳೆಯರು ಕೂಡಾ ದಿನನಿತ್ಯ ಇಲ್ಲಿ ಬಟ್ಟೆಗಳನ್ನು ಶುಚಿಗೊಳಿಸುತ್ತಾರೆ. ಅವರಿಗೂ ಕೂಡಾ ನಿಭರ್ಂದ ಹಾಕಬೇಕಾಗಿದೆ. ಬಾಂದಾರ ತುಂಬಿ ಹರಿಯುತ್ತಿರುವುದರಿಂದ ಬಾಂದಾರವನ್ನು ನೋಡಲು ನೂರಾರು ಜನರು ಬರುತ್ತಿದ್ದಾರೆ.

Social Plugin