ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟವೊಂದರಲ್ಲಿ ಬೋರವೆಲ್ ಮೂಲಕ ನೀರು ಕಾರಂಜಿಯಂತೆ ಚಿಮ್ಮುತ್ತಿದೆ.
ಬೋರವೆಲ್ ಮೂಲಕ ಕಾರಂಜಿಯಂತೆ ಚಿಮ್ಮುತ್ತಿರುವ ನೀರು
ರಬಕವಿ-ಬನಹಟ್ಟಿ,ಅ16: ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟವೊಂದರಲ್ಲಿ ಬೋರವೆಲ್ ಮೂಲಕ ನೀರು ಕಾರಂಜಿಯಂತೆ ಚಿಮ್ಮುತ್ತಿದೆ.
ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಂರ್ತಜಲ ಮಟ್ಟ ಹೆಚ್ಚಾಗಿದ್ದು ಬನಹಟ್ಟಿಯ ಘೂಳಪ್ಪ ಧರೆಪ್ಪ ಭಿ.ಪಾಟೀಲ ಅವರ ತೋಟದಲ್ಲಿನ 13 ವರ್ಷದ ಹಳೇಯ 300 ಫೂಟ್ ಆಳದ ಬೋರವೆಲ್‍ನಲ್ಲಿ ನೀರು ಚಿಮ್ಮುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೇ ಪರದಾಡುವಂತಾಗುತ್ತಿತ್ತು. ಇಂದು ನಿರಂತರ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಿ ನೀರು ಚಿಮ್ಮುತ್ತಿದೆ ಎನ್ನುತ್ತಾರೆ ರೈತರು. ಇದು ನೋಡುಗರರನ್ನು ಸೆಳೆಯುತ್ತಿದೆ.


Social Plugin