ಡಾ; ಎಪಿಜೆ ಅಬ್ದುಲ್‍ಕಲಾಂ ಜನ್ಮದಿನಾಚರಣೆ
ರಬಕವಿ-ಬನಹಟ್ಟಿ,ಅ17: ಸಮೀಪದ ಚಿಮ್ಮಡ ಗ್ರಾಮದಲ್ಲಿ ಮಿಸೈಲ್ ಮಾನ್ ಎಂದು ಕರೆಯಲ್ಪಡುತಿದ್ದ ವಿಜಾÐನಿ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‍ಕಲಾಂರ 89ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಸ್ಥಳಿಯ ಅಂಜುಮನ್ ಜಾಮಿಯಾ ಸಭಾಂಗಣದಲ್ಲಿ ಡಾ.ಎಪಿಜೆ ಅಬ್ದುಲ್‍ಕಲಾಂ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಂತ್ರ ಪಠಣ ಹಾಗೂ ಕುರಾನ್ ಪಠಣದೊಣದಿಗೆ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲಾಯಿತು.
ಎಪಿಎಂಸಿ ನಿರ್ದೇಶಕ ಪ್ರಭು ಮುಧೋಳ, ಗ್ರಾಂ.ಪಂ. ಮಾಜಿ ಉಪಾದ್ಯಕ್ಷ ಆನಂದ ಕವಟಿ, ಸಮಾಜದ ಪ್ರಮುಖರಾದ ಮಹ್ಮದ ಯಾದವಾಡ, ರುಸ್ತುಂ ಮಾಲದಾರ, ಎಸ್ಡಿಎಂಸಿ ಅಧ್ಯಕ್ಷ ಇಮಾಮ ಯಾದವಾಡ, ರವಿ ಮಾಯನ್ನವರ, ಮಲಿಕ ಸರಕಾವಸ, ಸಲಿಂ ಸರಕಾವಸ, ಹಾಫಿಜ ಮಲಿಕ ವಿಜಾಪೂರ, ರವಿ ದೊಡವಾಡ ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಇಲಾಹಿ ಜಮಖಂಡಿ ಸ್ವಾಗತಿಸಿ ನಿರೂಪಿಸಿದರು. ಶ್ರೀಶೈಲ ಮಠಪತಿ ವಂದಿಸಿದರು.

Social Plugin