2019-20ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ 20 ಲಕ್ಷ ವೆಚ್ಚದ ಸಿ ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ.

ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ರಬಕವಿ-ಬನಹಟ್ಟಿ,ಅ16: ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದ ಸವದಿ ಹೇಳಿದರು. 

ಅವರು ನಗರದ ಅಶೋಕ ಕಾಲನಿಯ ವಾರ್ಡ ನಂ. 10 ರಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಇವರ ವತಿಯಿಂದ 2019-20ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ 20 ಲಕ್ಷ ವೆಚ್ಚದ ಸಿ ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲಾಗುತ್ತಿದ್ದು, ಅತಿ ಅವಶ್ಯಕವಾಗಿರುವ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸದಾಶಿವ ಪರೀಟ, ದುರ್ಗವ್ವ ಹರಿಜನ, ಶ್ರೀಶೈಲ ಗಸ್ತಿ, ರಾಜು ಅಂಬಲಿ, ಡಾ. ಅಕ್ಬರ ತಾಂಬೋಳಿ, ಬಸವಂತ ಟರ್ಕಿ, ರಾಜು ಯಂಕಂಚಿ, ಪ್ರಕಾಶ ಪವಾರ, ಸುರೇಶ ಆರಿ, ರಾಜು ಹಟ್ಟಿ, ಯಾಸೀನ ತಾಂಬೋಳಿ, ಬಂದವ್ವ ತೇರದಾಳ ಸೇರಿದಂತೆ ಅನೇಕರು ಇದ್ದರು.