ರಬಕವಿ-ಬನಹಟ್ಟಿ,ಅ16: ಉತ್ತರ ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರದಿಂದ ಕೃಷ್ಣಾ ನದಿ ಮತ್ತೇ ಮೈದುಂಬಿ ಹರಿಯುವಲ್ಲಿ ಕಾರಣವಾಗಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳ-ಕೊಳ್ಳಗಳೆಲ್ಲ ತುಂಬಿದ್ದು, ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ಕೇವಲ 30 ರಿಂದ 40 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಇದೀಗ ಮಳೆರಾಯನ ಪವಾಡದಿಂದಾಗಿ 1.45 ಲಕ್ಷ ಕ್ಯುಸೆಕ್ ನೀರು ಬರುತ್ತಿದ್ದು, ನೀರು ಹಿಡಿದಿಟ್ಟುಕೊಳ್ಳದೆ ಅಷ್ಟೇ ಪ್ರಮಾಣದಲ್ಲಿ ಹಿಪ್ಪರಗಿಯ 10 ಗೇಟ್‍ಗಳ ಮೂಲಕ ಬಿಡಲಾಗುತ್ತಿದೆ.
ಹಿಪ್ಪರಗಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 523.1 ಮೀ. ಇದೆ. 4.39 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.
Social Plugin