ರಬಕವಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. (ದಕ್ಷಿಣ ವಲಯ) ಇದರ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೆರಿಸಿದ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಶ್ರೀಗಳು
ಆರ್ಥಿಕ ಸ್ವಾವಲಂಭನೆಗೆ ಸಹಕಾರಿ ಸಂಘಗಳ ಪಾತ್ರ ಪ್ರಮುಖ
ರಬಕವಿ-ಬನಹಟ್ಟಿ,ಅ12: ಆರ್ಥಿಕ ಸ್ವಾವಲಂಭನೆಗೆ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿವೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಅವರು ರಬಕವಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. (ದಕ್ಷಿಣ ವಲಯ) ಇದರ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೆರಿಸಿ ಮಾತನಾಡಿದರು. ರೈತರು ತಮ್ಮ ಆರ್ಥಿಕ ಬಲವರ್ಧನೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಬಳಸಿಕೊಳ್ಳಬೇಕು. ಸಾಲ ಪಡೆಯುವುದರೊಂದಿಗೆ ಮರುಪಾವತಿಸುವುದರ ಮೂಲಕ ಸಹಕಾರಿ ಸಂಘಗಳ ಬೆಳವಣಗೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ವಹಿಸಿದ್ದರು.
ಕಾರ್ಯಾಲಯವನ್ನು ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಉಪಾಧ್ಯಕ್ಷ ಶ್ರೀಶೈಲ ದಲಾಲ, ಸದಸ್ಯರಾದ ಸದಾಶಿವ ನಾಯಕ, ಮಾರುತಿ ಮುಶಪ್ಪಗೋಳ, ಮಹಾದೇವ ಜೀರಗಾಳ, ಪರಪ್ಪ ಪೂಜಾರಿ, ಮಹಾದೇವ ದೂಪದಾಳ, ಬಸಪ್ಪ ಮಲ್ಲಾಡಿ, ಬಾಬು ಮಹಾಜನ, ಉದ್ದವ್ವ ಪಾಟೀಲ, ಯಲ್ಲವ್ವ ಬಾಗಿ, ಭೀಮಸಿ ಮಗದುಮ್, ಶಿವಾನಂದ ಗಾಯಕವಾಡ, ಪರಪ್ಪ ಉರಭಿನವರ, ಚಿದಾನಂದ ಗಾಳಿ, ಅಶೋಕ ಹಳ್ಳೂರ, ರಾಮಚಂದ್ರ ಕೊಡಗೆ, ಶ್ರೀಶೈಲ ಭೂಯಾರ, ಅರುಣ ಬುದ್ನ, ಬಸವರಾಜ ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಈಶ್ವರ ಬಿರಾದಾರಪಾಟೀಲ ಸೇರಿದಂತೆ ಅನೇಕರು ಇದ್ದರು.

Social Plugin