ತೇರದಾಳದ ಉಪನೋಂದಣಿ ಕಚೇರಿಗೆ ಪಿಡಬ್ಲೂಡಿ ಅಧಿಕಾರಿಗಳ ಭೇಟಿ ನೀಡಿದರು.
ಉಪನೋಂದಣಿ ಕಚೇರಿಗೆ ಪಿಡಬ್ಲೂಡಿ ಅಧಿಕಾರಿಗಳ ಭೇಟಿ 
ತೇರದಾಳ : ನೂತನ ತಾಲೂಕು ತೇರದಾಳ ಪಟ್ಟಣದಲ್ಲಿರುವ ಉಪನೋಂದಣಿ ಕಚೇರಿಗೆ ಶಾಸಕರ ದೂರವಾಣಿ ಕರೆಯ ಮೇರೆಗೆ ಪಿಡಬ್ಲೂಡಿ ಅಧಿಕಾರಿಗಳು ಇಂದು ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಪರಿಶೀಲನೆ ಮಾಡಿದರು.
  ಕಳೆದ ಎರಡು ದಿನಗಳ ಹಿಂದೆ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಇವರು ತಮ್ಮ ವೈಯಕ್ತಿಕ ಕೆಲಸ ಕಾರ್ಯಕ್ಕಾಗಿ ಪಟ್ಟಣದ ಉಪನೋಂದಣಿ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿಉಪನೋಂದಣಿ ಕಚೇರಿ ಅಧಿಕಾರಿ ಎಸ್.ವಾಯ್.ಸಿದ್ದನಗೌಡರ ರಾಜ್ಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಜಾಗೃತಿ ಸಮೀತಿಯ ಕೆ.ಎಸ್.ರಂಗಸ್ವಾಮಿ ಇವರು ಈ ಕಚೇರಿಯು ತುಂಬಾ ಪುರಾತನ ಕಟ್ಟಡವಾಗಿದ್ದು, ಮಳೆ ಬಂದಾಗ ಕಟ್ಟಡ ಸೊರುತ್ತಿರುವುದರಿಂದ ಕಚೇರಿಯಲ್ಲಿರುವಂತ ದಾಖಲೆಗಳು ಮಳೆಯ ನೀರಿಗೆ ತೋಯ್ದು ಹಾಳಾಗುವ ಸ್ಥಿತಿಯಲ್ಲವೆ ಕಾರಣ ತಾವು ಇದರ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದರು. ಕೂಡಲೆ ಇದಕ್ಕೆ ಸ್ಪಂಧಿಸಿದ ಶಾಸಕ ಸಿದ್ದು ಸವದಿಯವರು ದೂರವಾಣಿ ಮೂಲಕ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ತೇರದಾಳ ಪಟ್ಟಣದ ಉಪನೋಂದಣಿ ಕಚೇರಿಯಲ್ಲಿರುವ ಸಮಸ್ಯೆಯನ್ನು ವಿಳಂಬ ಮಾಡದೆ ಬಗೆಹರಿಸಬೇಕು ಎಂದರು. 
  ಅದರನ್ವಯ ಇಂದು ನೋಂದಣಿ ಕಚೇರಿಗೆ ಭೇಟಿ ನೀಡಿದ ಪಿಡಬ್ಲೂಡಿಯ ಅಧಿಕಾರಿ ಪಿ.ಎಚ್.ಗಾಯಕವಾಡ ಹಾಗೂ ಎಇ ನಾಗಪ್ಪ ಇವರು ಗುತ್ತಿಗೆದಾರರಾದ ಸಿ.ಎಸ್.ತಾಂಬೋಳಿಯವರೊಂದಿಗೆ ಭೇಟಿ ನೀಡಿ ಕಚೇರಿಯನ್ನು ಪರಿಶೀಲನೆ ಮಾಡಿ ಗುತ್ತಿಗೆದಾರರಿಗೆ ಇನ್ನೆರಡು ದಿನಗಳಲ್ಲಿ ಕೆಲಸವನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿಪಿ.ಎಚ್.ಗಾಯಕವಾಡ ಮಾತನಾಡಿ ಇದು ಅತ್ಯಂತ ಪುರಾತನ ಕಟ್ಟಡವಾಗಿರುವುದರಿಂದ ಮೇಲ್ಚಾವಣಿಗಳು ಸಾಕಷ್ಟು ಹಳೆಯದಾಗಿದ್ದು ಹಾಗೂ ಇತಿಹಾಸವನ್ನು ಹೊಂದಿರುವ ಕಟ್ಟಡವಾಗಿರುವುದರಿಂದ ಅದನ್ನು ಬಹಳ ಜಾಗೃತೆಯಿಂದ ಸರಿ ಪಡಿಸುವ ಅವಶ್ಯಕತೆಯಿರುವುದರಿಂದ ಕಾಲಾವಕಾಶ ಬೇಕಾಗುತ್ತದೆ ಕಾರಣ ಸಾರ್ವಜನಿಕರು ಸಹಕರಿಸಬೇಕು. ಶಾಸಕರ ನಿರ್ದೇಶನದ ಈ ಕೆಲಸವನ್ನು ನಾನು ಗುತ್ತಿಗೆದಾರರಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಅವಧಿಯಲ್ಲಿಯೇ ಮುಗಿಸುವಂತೆ ತಿಳಿಸಿದ್ದೇನೆ ಎಂದರು.