ಪುರಸಭೆ ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆ ಮುಂದೂಡಿಕೆ
ತೇರದಾಳ : ಭಾರಿ ಕುತೂಹಲ ಮೂಡಿಸಿರುವ ಪಟ್ಟಣದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕೊನೆ ಗಳಿಗೆಯಲ್ಲಿ ಮುಂದೂಡಲಾಯಿತು. ಈ ಕುರಿತು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ಅಧಿಕೃತವಾಗಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯನ್ನು ಸರಕಾರದ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಅತಿ ಆತುರದಲ್ಲಿದ್ದ ಪುರಸಭೆಗೆ ಚುನಾಯಿತರಾಗಿರುವವರು ಎರಡು ವರ್ಷ ಕಳೆದ ಮೇಲೆ ನಮಗೆ ಅಧ್ಯಕ್ಷ ಉಪಾಧ್ಯಕ್ಷ ಆಗುವ ಸೌಭಾಗ್ಯ ಬಂದಿತೆಂದು ತುಂಬಾ ಸಂತೋಷದಲ್ಲಿದ್ದರು. ಇನ್ನೇನು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಸುವ ಸಮಯ ಸಮೀಪಸುತ್ತಿದ್ದಂತೆ ಚುನಾವಣಾಧಿಕಾರಿ ಪ್ರಶಾಂತ ಚನಗೊಂಡ ಚುನಾವಣೆ ಮುಂದೂಡಲಾಗಿದೆ ಎಂದರು. ಈಗಾಗಲೆ ಅ.21ರಂದು ಚುನಾವಣೆನೆ ತಡೆಯಾಜ್ಞೆಯ ಆದೇಶ ಬಂದಿತ್ತು. ಆದರೆ ಇಂದು ಗುರುವಾರ ಮಧ್ಯಾನದವರೆಗೆ ತಡೆಯಾಜ್ಞೆ ತೆರವುಗೊಳಿಸಿದ್ದ ಬಗ್ಗೆ ಯಾವುದೇ ರೀತಿಯ ಆದೇಶ ಬರದೇ ಇರುವುದರಿಂದ ಅನಿವಾರ್ಯವಾಗಿ ಚುನಾವಣಾ ಪ್ರಕ್ರಿಯೆಯನ್ನು ಮುಂದಿನ ಆದೇಶ ಬರುವವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೊಟೆ, ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸ್.ಆಯ್.ಸೂಡಿ ಸೇರಿದಂತೆ ಇನ್ನಿತರರು ಇದ್ದರು.
ಬಂದೂ ಬಸ್ತ್‍ಗೆ ಸೂಕ್ತ ಕ್ರಮ : ಮುಂಜಾಗ್ರತ ಕ್ರಮವಾಗಿ ಸ್ಥಳೀಯ ಠಾಣಾಧಿಕಾರಿ ವಿಜಯ ಕಾಂಬಳೆ ಇವರು ಸಾಕಷ್ಟು ಸಿಬ್ಬಂದಿಯವರೊಂದಿಗೆ ಚುನಾವಣೆ ಸುಸೂತ್ರವಾಗಿ ನಡೆಯಲಿ ಎಂದು ಬಂದೂ ಬಸ್ತ್‍ಗೆ ಸೂಕ್ತ ಕ್ರಮ ಕೈಗೊಂಡಿದ್ದರು.

Social Plugin