ರಬಕವಿ ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿ ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. 

ಚೆನ್ನಮ್ಮ ಇಂದಿನ ಎಲ್ಲ ಮಹಿಳೆಯರಿಗೆ ಮಾದರಿ
*ಚೆನ್ನಮ್ಮನ ನಾಡು-ನುಡಿಯ ಮೇಲಿನ ಅಭಿಮಾನ ಯುವಜನಾಂಗಕ್ಕೆ ಆದರ್ಶಪ್ರಾಯ
ರಬಕವಿ-ಬನಹಟ್ಟಿ,ಅ23 : ಬ್ರಿಟಿಷರಿಂದ ನಮ್ಮ ನೆಲ-ಜಲ ರಕ್ಷಣೆ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಆಕೆಯಲ್ಲಿದ್ದ ಛಲ, ಆತ್ಮವಿಶ್ವಾಸ, ಶೂರತ್ವ, ನಾಡು-ನುಡಿಯ ಮೇಲಿನ ಅಭಿಮಾನ ಎಲ್ಲವೂ ಯುವಜನಾಂಗಕ್ಕೆ ಆದರ್ಶಪ್ರಾಯ ಎಂದು ಯುವ ಮುಖಂಡ ವಿದ್ಯಾಧರ ಸವದಿ ಹೇಳಿದರು. 
ಅವರು ಶುಕ್ರವಾರ ನಗರದ ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡ ರಾಣಿ ಚೆನ್ನಮ್ಮಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ನಮ್ಮ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ಗುರಿ ಇಟ್ಟುಕೊಂಡು ಹೋರಾಟ ನಡೆಸಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚೆನ್ನಮ್ಮನವರ ಬದುಕು, ಹೋರಾಟ ಅನನ್ಯ. ಅವರ ದೇಶಪ್ರೇಮ ಎಲ್ಲರಿಗೂ ಅನುಕರಣೀಯವಾಗಿದ್ದು, ಪ್ರತಿ ಮನೆಯಲ್ಲೂ ರಾಣಿ ಚೆನ್ನಮ್ಮನಂತಹ ಮಹಿಳೆಯರು ಹುಟ್ಟಿಬರಬೇಕು ಎಂದರು. 
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಧರೆಪ್ಪ ಉಳ್ಳಾಗಡ್ಡಿ, ಶಿರಸ್ತೆದಾರರಾದ ಬಸವರಾಜ ಬಿಜ್ಜರಗಿ, ಉಪ ತಹಶೀಲ್ದಾರರಾದ ಎಸ್. ಎಲ್. ಕಾಗಿಯವರ, ವಿಜಯ ನಿಡಗುಂದಿ, ರವಿ ಈಟಿ, ಶ್ರೀಶೈಲ ದಲಾಲ, ವಿಜಯಕುಮಾರ ಪೂಜಾರಿ, ಮಹಾದೇವ ದೂಪದಾಳ, ಮಹಾದೇವ ಪಾಲಬಾಂವಿ, ಈಶ್ವರ ಬಿರಾದಾರಪಾಟೀಲ, ಭೀಮಸಿ ಪಾಟೀಲ, ಗೌರಿ ಮಿಳ್ಳಿ, ಭೀಮಸಿ ಹಂದಿಗುಂದ, ಶಿವಾನಂದ ಹೊಸಮನಿ, ರವಿ ದೇಸಾಯಿ, ಪ್ರಶಾಂತ ಪಾಲಬಾಂವಿ, ಈಸು ಮೂಡಲಗಿ, ಸುರೇಶ ಮುಳವಾಡ, ಮಲಕಪ್ಪ ಪಾಟೀಲ, ಗಿರಮಲ್ಲಪ್ಪ ಪಾಟೀಲ. ಬಾಬಾಗೌಡ ಪಾಟೀಲ, ಲಕ್ಕಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.