ತೇರದಾಳ ಪಟ್ಟಣದ ಎಸ್‍ಪಿ ಕಾಲೇಜಿಗೆ ತಹಶೀಲ್ದಾರ ಪ್ರಶಾಂತ ಚನಗೊಂಡ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾಲೇಜಿನ ಆವರಣದಲ್ಲಿ ನೀರು ಸಂಗ್ರಹ ತಹಶೀಲ್ದಾರರಿಂದ ಪರಿಶೀಲನೆ
ತೇರದಾಳ : ಪಟ್ಟಣದ ಎಸ್‍ಪಿ ಕಾಲೇಜಿನ ಆವರಣದಲ್ಲಿ ಮಳೆಯ ನೀರು ಹಾಗೂ ಚರಂಡಿ ನೀರು ಸಂಗ್ರಹವಾಗಿವುದರಿಂದ ಚರಂಡಿ ನೀರು ಆವರಣದಲ್ಲಿ ಬರದಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರಿಗೆ ಸೂಚನೆ ನೀಡಿದರು.
  ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಆವರಣದಲ್ಲಿ ಮಳೆಯ ನೀರು ಹಾಗೂ ಚರಂಡಿ ನೀರು ಸಂಗ್ರಹವಾಗಿತ್ತು. ಇದರಿಂದ ಶಾಲಾ ಆವರಣ ಗಬ್ಬೆದ್ದು ನಾರುತ್ತಿತ್ತು ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಶಿತವಾಗಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಪರಿಸ್ಥಿತಿ ಎರ್ಪಟ್ಟಿದೆ. ಸುತ್ತ ಮುತ್ತಲಿನಲ್ಲಿ ವಾಸಿಸುತ್ತಿರುವ ಕುಟುಂಬಗಳು ಸಾಂಕ್ರಾಮಿಕ ರೋಗಗಳ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಈ ಸುದ್ದಿಯನ್ನು ತಿಳಿದು ತಹಶೀಲ್ದಾರ ಪ್ರಶಾಂತ ಚನಗೊಂಡ ಇಂದು ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರಿಗೆ ಚರಂಡಿ ನೀರು ಶಾಲಾ ಆವರಣದಲ್ಲಿ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು. ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿ ಶಾಲಾ ಆವರಣವು ಚರಂಡಿಗಿಂತ ಕೆಳ ಹಂತದಲ್ಲಿದೆ ಅದಕ್ಕೆ ನಿಮ್ಮ ಶಾಲಾ ಮೈದಾನಕ್ಕೆ ಗರಸು ಹಾಕಿ ಶಾಲೆಯ ಆವರಣದಲ್ಲಿರುವಂತ ನೀರು ತಾನಾಗಿಯೇ ಚರಂಡಿಗೆ ಹೋಗುವ ರೀತಿಯಲ್ಲಿ ಇನ್ನಷ್ಟು ಎತ್ತರಿಸಬೇಕು ಎಂದು ಈಶ್ವರ ಕಿತ್ತೂರ ಹಾಗೂ ಡಾ.ಶಂಕರ ಅಥಣಿ ಇವರಿಗೆ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ಮಹೇಶ ಕಾಲತಿಪ್ಪಿ, ಪ್ರಭು ಐನಾಪೂರ, ಶ್ರೀಕಾಂತ ಗದಗಿ, ಬಿ.ಎಸ್.ತೇಜೋಮಾಳಿ ಸೇರಿದಂತೆ ಇನ್ನಿತರರು ಇದ್ದರು.
ಅಂಬೇಡ್ಕರ ಸರ್ಕಲ್‍ಗೆ ಭೇಟಿ : ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಅಂಬೇಡ್ಕರ ಸರ್ಕಲ್‍ದಲ್ಲಿನ ಮನೆಗಳಿಗೆ ಮಳೆಯ ನೀರು ಹಾಗೂ ಚರಂಡಿ ನೀರು ನುಗ್ಗಿದ್ದನ್ನು ತಿಳಿದು ಇಂದು ಅಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತಹಶೀಲ್ದಾರ ಪ್ರಶಾಂತ ಚನಗೊಂಡ ಇವರ ಮುಂದೆ ತೋಡಿಕೊಂಡರು. ಪ್ರತಿ ಸಲ ಮಳೆ ಬಂದಾಗ ಪಟ್ಟಣದಲ್ಲಿನ ಎಲ್ಲ ಚರಂಡಿಗಳ ನೀರು ಸೇರಿಕೊಂಡು ಇದೇ ಚರಂಡಿ ಮೂಲಕ ಹಾದು ಹೋಗಬೇಕು. ಈ ಚರಂಡಿ ನೀರು ಹೋಗಲು ಮುಂದೆ ದಾರಿ ಇಲ್ಲದ ಕಾರಣ ಇಲ್ಲಿಯೇ ಸಂಗ್ರಹವಾಗಿ ನೀರು ನಮ್ಮ ಮನೆಯೊಳಗೆ ಬರುತ್ತದೆ ಎಂದು ಹೇಳಿದಾಗ ಈ ಚರಂಡಿ ನೀರು ಹೋಗಲು ಒಂದು ಶಾಶ್ವತ ಪರಿಹಾರ ಕಂಡು ಹಿಡಿಯುವುದಾಗಿ ಹೇಳಿದರು. 
  ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ವಿದ್ಯಾಧರ ಧರೆಣ್ಣವರ, ಪ್ರಭು ರೋಡಕರ, ಗುಣವಂತ ರೋಡಕರ ಸೇರಿದಂತೆ ಇನ್ನಿತರರು ಇದ್ದರು.