ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ಹಮ್ಮಿಕೊಂಡ ಸ್ವಚ್ಛಭಾರತ ಜನಜಾಗೃತಿ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ದೆಯಲ್ಲಿ ಜಗದಾಳ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ ಚಿತ್ರಗಳು
ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿದಾಗಲೇ ಸ್ವಚ್ಛಭಾರತದ ಕನಸು ನನಸು; ಶ್ರೀನಿವಾಸ ಜಾಧವ
ರಬಕವಿ-ಬನಹಟ್ಟಿ,ಅ9: ಮುಂದಿನ ದಿನಗಳಲ್ಲಿ ಸ್ವಚ್ಛಂದ ವಾತಾವರಣ ನಿರ್ಮಾಣವಾಗಲು ಇಂದಿನಿಂದಲೇ ಪ್ರಾಥಮಿಕ ಹಂತದ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸ್ವಚ್ಛಭಾರತದ ಕನಸು ನನಸಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಇತ್ತೀಚಗೆ ನಗರಸಭೆ ಸಭಾಭವನದಲ್ಲಿ ಗಾಂಧೀಜಿಯವರ 151ನೇ ಜಯಂತಿ ಮಾಸಾಚರಣೆ ಅಂಗವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಸ್ವಚ್ಛಭಾರತ ಜನ ಜಾಗೃತಿ ಕರ್ಯಾಕ್ರಮ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ರಂಗೋಲಿ ಸ್ವರ್ದೆ, ಚಿತ್ರಕಲಾ ಸ್ಪರ್ದೆಯಂತಹ ಕಾರ್ಯಕ್ರಮಗಳನ್ನು ನಗರಸಭೆ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಶಿಕ್ಷಕರ ಸಹಕಾರ ಬಹುಮುಖ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅನೇಕ ಮಕ್ಕಳು ಸ್ವಚ್ಛತೆಯ ಬಗ್ಗೆ ರಂಗೋಲಿ ಹಾಗೂ ಚಿತ್ರಗಳನ್ನು ಬಿಡಿಸಿದರು.
ಸ್ಪರ್ಧೆಯಲ್ಲಿ ಜಗದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆಯಲ್ಲಿ ತೇಜಸ್ವಿನಿ ಬಸವರಾಜ್ ಕೊಕಟನೂರ, ಪೂಜಾ ಪ. ಬಿರಾದಾರಪಾಟೀಲ್,
ಪ್ರತಿಕ್ಷಾ. ಬ. ಕುಳಲಿ, ಅಮೃತಾ ಅಶೋಕ ಬನ್ನೂರ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಠ್ಠಲ್ ಸದಾಶಿವ. ಉಪ್ಪಾರ್, ಸುಮಂಗಲಾ ಗಂ. ಮಠದ, ಶ್ರೀಶೈಲ್ ಅಣ್ಣಪ್ಪ ಮಾಳಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿತ್ರಕಲಾ ಶಿಕ್ಷಕ ಅಶೋಕ. ಬಿ. ಮಾಂಗ ಸೇರಿದಂತೆ ಶಿಕ್ಷಕ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಸರ್ವ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.

Social Plugin