ಗುಡ್ಡಾಪೂರ ದಾನಮ್ಮದೇವಿ ದರ್ಶನ ಭಾಗ್ಯವಿಲ್ಲ
ರಬಕವಿ-ಬನಹಟ್ಟಿ,ಅ9: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಹಾವಳಿಯಿಂದ ಆ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನ ಭಾಗ್ಯವಿಲ್ಲದಂತಾಗಿದೆ. ಅದರಲ್ಲೂ ಉತ್ತರ ಕರ್ನಾಟದ ಬಹುಪಾಲು ಭಕ್ತರು ದಾನಮ್ಮತಾಯಿಯ ಭಕ್ತರಾಗಿರುವುದರಿಂದ ಅಧಿಕ ಮಾಸದಲ್ಲಿ ತಾಯಿಯ ದರ್ಶನ ಪಡೆಯಬೇಕೆಂಬ ಹಂಬಲದಿಂದ ಲಕ್ಷಾಂತರ ಭಕ್ತರ ಭಾವನೆ ಕಮರಿಹೋಗಿವೆ. ಆದ್ದರಿಂದ ಅಕ್ಟೋಬರ್ ತಿಂಗಳು ಕೂಡಾ ಗುಡ್ಡಾಪುರ ದಾನಮ್ಮದೇವಿ ದರ್ಶನ ಭಾಗ್ಯವನ್ನು ನಿಷೇಧಿಸಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆ ಹೊರಡಿಸಿದೆ.
ದೂರದ ಊರುಗಳಿಂದ ಭಕ್ತರು ಬಂದು ಮರಳಿ ಹೋಗಬಾರದೆಂಬ ಉದ್ದೇಶದಿಂದ ಈ ಪ್ರಕಟಣೆ ಹೋರಡಿಸಿರುವ ಟ್ರಸ್ಟ್ ದೇವಸ್ಥಾನ ಎಲ್ಲಾ ಬಾಗಿಲಗಳನ್ನು ಸಂಪೂರ್ಣ ಬಂದ್ ಮಾಡಿ, ಮಹಾರಾಷ್ಟ್ರ ಸರ್ಕಾರ ಆದೇಶದಂತೆ ಅತಿ ಕಟ್ಟುನಿಟ್ಟಾಗಿ ಪ್ರತಿ ದಿನ ಮೂರು ಸಮಯ ದೇವಿಯ ಪೂಜೆಯನ್ನು ಗರ್ಭಗುಡಿಯಲ್ಲಿ ಪೂಜಾರಿಯೊಬ್ಬರಿಂದಲೇ ಮಾಡಿಸಲಾಗುತ್ತಿದೆ. ಕೊವಿಡ್-19 ನೀಯಮಾವಳಿಗಳು ಸಡಿಲಾಗುವವರೆಗೆ ಭಕ್ತರು ದೇವಿಯ ದರ್ಶನಕ್ಕೆ ಬರಬಾರದೆಂದು ಅವರು ಮನವಿ ಮಾಡಿದ್ದಾರೆ.

Social Plugin