ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿ ಆವರಣದಲ್ಲಿ ದಲಿತ ಸಂರ್ಘಷ ಸಮಿತಿ-ಕರ್ನಾಟಕ ಮತ್ತು ಸಮತಾದಳ ರಬಕವಿ-ಬನಹಟ್ಟಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಕರಣವನ್ನು ಸುಪ್ರೀಕೋರ್ಟ ನ್ಯಾಯಮೂರ್ತಿಗಳ ಮುಖಾಂತರ ತನಿಖೆ ನಡೆಸಿ
ರಬಕವಿ-ಬನಹಟ್ಟಿ,ಅ6: ಉತ್ತರ ಪ್ರದೇಶದ ಹತ್ರಾಸನ ಯುವತಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣವನ್ನು ಕೂಡಲೇ ಸುಪ್ರೀಕೋರ್ಟ ನ್ಯಾಯಮೂರ್ತಿಗಳ ಮುಖಾಂತರ ತನಿಖೆ ನಡೆಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಒದಬೇಕು ಎಂದು ದಲಿತ ಸಂಘರ್ಷ ಸಮಿತಿ-ಕರ್ನಾಟಕ ಬೆಳಗಾವಿ ವಿಭಾಗದ ಸಂಚಾಲಕರಾದ ಬೀಮರಾವ ಕಾಳವ್ವಗೋಳ ಹೇಳಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿ ಆವರಣದಲ್ಲಿ ದಲಿತ ಸಂರ್ಘಷ ಸಮಿತಿ-ಕರ್ನಾಟಕಮತ್ತುಸಮತಾದಳ ರಬಕವಿ-ಬನಹಟ್ಟಿ ಅವರ ವತಿಯಿಂದ ಉತ್ತರಪ್ರದೇಶದ ಹತ್ರಾಸ್‍ನಲ್ಲಿ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಘಟಕ, ಸರಕಾರಿ ಕಛೇರಿಗಳನ್ನು ಖಾಸಗೀಕರಣ ಮಾಡುತ್ತಿರುವುದು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಭೂ ಸುಧಾರಣೆ ಕಾಯ್ದೆ ಮತ್ತ ಎಪಿಎಂಸಿ ಕಾಯ್ದೆ ಮಸೂದೆ ತಿದ್ದುಪಡಿ ಮಾಡುವುದರ ಮೂಲಕ ರೈತ ವಿರೋಧಿ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಅನುಸರಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಆ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ರದ್ದಾಗಬೇಕು. ಅಲ್ಲದೇ ಕೇಂದ್ರ ಸರಕಾರ ಸರಕಾರದ ವಿವಿಧ ಇಲಾಖೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ ಇವೆಲ್ಲವನ್ನು ನಮ್ಮ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದರು.
ಇದಕ್ಕೂ ಮುಂಚೆ ನಗರದ ಪೊಲೀಸ್ ಠಾಣೆಯಿಂದ ತಹಶೀಲ್ದಾರ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವನಿಂಗ ಮೇತ್ರಿ, ಸಮತಾ ಸೈನಿಕದಳದ ತಾಲೂಕು ಅಧ್ಯಕ್ಷ ರಮೇಶ ಬಸಪ್ಪಗೋಳ, ಅಶೋಕ ತಳಗಡೆ, ರಮೇಶ ಗೌಂಡಿ, ಅಶೋಕ ಮುಗಳಖೋಡ, ರವಿ ಮೇತ್ರಿ, ವಿನೋದÀ ಸಂಗಾನಟ್ಟಿ, ಶೆಟ್ಟೆಪ್ಪ ಹಲಸಪ್ಪಗೋಳ, ಮಾನಿಂಗ ರಂಜನಗಿ, ಮಂಜು ಕಳೋಳ್ಯೆಪಪ್ಗೋಳ, ಪುಂಡಲಿಕ ಶಿಂಧೆ, ಶಿವನಿಂಗ ಸೋನೋನೆ, ಸದಾಶಿವ ಸೋನೋನೆ ಸೇರಿದಂತೆ ಅನೇಕರು ಇದ್ದರು.

Social Plugin