ಬನಹಟ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲ್ಲಿ ಸಿಮೆಂಟ್ ಬ್ರಿಕ್ಸ್ ಹಾಕುವ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಲಾಯಿತು. 

ದೇವಸ್ಥಾನಗಳು ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ : ಧಬಾಡಿ 
ರಬಕವಿ-ಬನಹಟ್ಟಿಅ8: ದೇವಸ್ಥಾನಗಳು ಅಭಿವೃದ್ಧಿ ಹೊಂದಲ್ಲು ಭಕ್ತರ ಸಹಕಾರ ಅಗತ್ಯ ವೆಂದ ಮಂಗಳವಾರ ಪೇಟೆ ದೈವ ಮಂಡಳಿಯ ಚೇರಮೇನ್ನರಾದ  ಶ್ರೀ ಶ್ರೀಶೈಲಪ್ಪ ಧಬಾಡಿ.ಹೇಳಿದರು.
ಅವರು ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಭಕ್ತ ಸಮೂಹ ಹಾಗೂ ಬನಹಟ್ಟಿ ದೇವಸ್ಥಾನಗಳು ವ್ಯವಸ್ಥಾಪಕ ಕಮೀಟಿ ಸಹಯೋಗದೊಂದಿಗೆ ಆವರಣದಲ್ಲಿ ಸಿಮೆಂಟ್ ಬ್ರಿಕ್ಸ್ ಹಾಕುವ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು. 
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಪಾದ ಬಾಣಕಾರ, ಪಂಡಿತಪ್ಪ ಪಟ್ಟಣ, ರಾಜಶೇಖರ ಮಾಲಾಪೂರ, ಮಲ್ಲಪ್ಪ ಹೂಲಿ, ಸಿದಗೀರೆಪ್ಪ ಮಂಡಿ, ಸಿದ್ದನಗೌಡ ಪಾಟೀಲ, ರಾಜಶೇಖರ ಶಿವಪೂಜೆ, ಮಲ್ಲಣ್ಣಾ ಬಾವಲತ್ತಿ, ಮಾದೇವಪ್ಪ ಮಂಡಿ, ಮಲ್ಲಕಪ್ಪ ಹಳಿಂಗಳಿ, ಸೋಮು ಜಾಡಗೌಡ, ಬಸವರಾಜ ಪಟ್ಟಣ, ಕಾಡಪ್ಪ ಪಟ್ಟಣ, ಮಹಾನಿಂಗಪ್ಪ ಮಂಡಿ, ರಮೇಶ ಪಟ್ಟಣ, ಪುರವಂತರಾದ ಶೇಖರ ಗಂಜ್ಯಾಳ.ಸದಾಶಿವ ಗಂಜ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.