ಹಿಪ್ಪರಗಿಯ ಕ್ಲಸ್ಟರ ವತಿಯಿಂದ ತಾಲೂಕಿನ ಹಿಪ್ಪರಗಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. 


ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಬೇಕು
ರಬಕವಿ-ಬನಹಟ್ಟಿ,ಅ11: ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ನೂತನ ಬಿಆರ್‍ಪಿ ಶಿವು ಯಾದವಾಡ ಹೇಳಿದರು. 
ಅವರು ಹಿಪ್ಪರಗಿಯ ಕ್ಲಸ್ಟರ ವತಿಯಿಂದ ತಾಲೂಕಿನ ಹಿಪ್ಪರಗಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ತಿಳಿಯುಂತೆ ಪ್ರಯೋಗಾತ್ಮಕವಾಗಿ ಶಿಕ್ಷಣವನ್ನು ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುತ್ತಾರೆ ಎಂದರು. 
ಈ ಸಂದರ್ಭದಲ್ಲಿ ನೂತನವಾಗಿ ಬಿಆರ್‍ಪಿ ಆಗಿ ಆಯ್ಕೆಯಾದ ಶಿವು ಪ್ರಸಾದ ಯಾದವಾಡ  ಮತ್ತು ನೂತನವಾಗಿ ಸಿಆರ್‍ಪಿ ಯಾಗಿ  ಆಯ್ಕೆಯಾದ  ಈರಪ್ಪ ಲಕ್ಕಪ್ಪಗೋಳ  ಅವರಿಗೆ  ಸ್ವಾಗತ ಹಾಗೂ  ಹಿಪ್ಪರಗಿಯ ಸಿಆರ್‍ಪಿ  ಪ್ರಶಾಂತ ಹೊಸಮನಿ ಇವರಿಗೆ ಬಿಳ್ಕೋಡುವ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರಾದ ವ್ಹಿ. ಎಸ್. ಕುಂಬಾರ ವಹಿಸಿದ್ದರು .
  ವೇದಿಕೆಯಲ್ಲಿ  ಮುಖ್ಯ ಅತಿಥಿಗಳಾಗಿ  ಶಿಕ್ಷಣ ಸಂಯೋಜಕರಾದ  ಡಿ. ಎ. ಗಲಗಲಿ,  ಕುಲಹಳ್ಳಿ ಪ್ರೌಢ ಶಾಲೆ ಮುಖ್ಯಗುರುಗಳಾದ  ಶಿವಾಜಿ ನಾಯಕ್ ಭಾಗವಹಿಸಿದ್ದರು  
ಸಮಾರಂಭದಲ್ಲಿ ಬಸು ಪಾಟೀಲ, ಪರಮೇಶ್ವರ  ಚಡಚಣ, ಡಬ್ಲ್ಯೂ. ವಾಯ್. ಭಜಂತ್ರಿ, ಸ್ನೇಹಾ ಸೋಹನಿ, ಬಸವರಾಜ  ತಿಪ್ಪಣ್ಣವರ ಸೇರಿದಂತೆ ಅನೇಕರು ಇದ್ದರು.