ಬನಹಟ್ಟಿ ನಗರದ ಸಮಸ್ತ ಗುರುಹಿರಿಯರ ವತಿಯಿಂದ ವೀರಯೋಧ ಬನಹಟ್ಟಿಯ ಪ್ರವೀಣಕುಮಾರ ಆಲಗೂರ ಹಾಗು ದಂಪತಿಯನ್ನು ಸನ್ಮಾನಿಸಲಾಯಿತು.
ಸೈನಿಕರನ್ನು ಗೌರಿಸುವದು ಸಂತಸವೆನಿಸುತ್ತದೆ-ಸವದಿ
ರಬಕವಿ-ಬನಹಟ್ಟಿ,ಅ13: ಸೇನೆ ಮತ್ತು ಸೈನಿಕರನ್ನು ಗೌರವಿಸುವುದು ಸಂತಸದ ವಿಷಯ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದ ಸದಾಶಿವ ಕಲ್ಯಾಣ ಮಂಟಪದಲ್ಲಿ ಶ್ರೀ ಕಾಡಸಿದ್ದೇಶ್ವರ ಮೆಲೋಡಿಸ್ ಗೆಳೆಯರ ಬಳಗ, ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘ ಹಾಗೂ ಬನಹಟ್ಟಿ ನಗರದ ಸಮಸ್ತ ಗುರುಹಿರಿಯರ ವತಿಯಿಂದ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ಸ್ವ-ನಗರಕ್ಕೆ ಆಗಮಿಸಿದ ವೀರಯೋಧ ಬನಹಟ್ಟಿಯ ಪ್ರವೀಣಕುಮಾರ ಆಲಗೂರ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ದೇಶದ ಹಾಗೂ ಜನತೆಯ ರಕ್ಷಣೆಗಾಗಿ ಎಲ್ಲವನ್ನು ತೊರೆದು ರಕ್ಷಣೆ ಮಾಡುವ ಕೆಲಸ ನಿಜವಾಗಿಯೂ ಸ್ಮರಣಿಯವಾದದು ಅಂಖಂಡ 17 ವರ್ಷಗಳ ಕಾಲ ದೇಶ ಸೇವೆ ಮಾಡಿ ಬಂದಂತಹ ಪ್ರವೀಣಕುಮಾರ ಆಲಗೂರರ ಸೇವೆ ಸ್ಮರಣೀಯವಾದುದು. ಭಾರತ ಮಾತೆಯ ಋಣ ತೀರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಒಬ್ಬ ಸೈನಿಕರು ಮೂಡಿಬರಬೇಕು ಎಂದರು.
ಈ ಸಂದರ್ಭದಲ್ಲಿ ವೀರಯೋಧ ಬನಹಟ್ಟಿಯ ಪ್ರವೀಣಕುಮಾರ ಆಲಗೂರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಹನಮಂತ ವೈದ್ಯ ವಹಿಸಿದ್ದರು.
ಸಮಾರಂಭದಲ್ಲಿ ಶಿವಾನಂದ ಗಾಯಕವಾಡ ಮಾತನಾಡಿದರು. ಶಿವರಾಯ ಆಸಂಗಿ, ರಾಜೇಂದ್ರ ಅಂಬಲಿ, ಶ್ರೀಶೈಲ ಧಬಾಡಿ, ಸುರೇಶ ಚಿಂಡಕ, ಬ್ರಿಜ್‍ಮೋಹನ ಡಾಗಾ, ವಿರುಪಾಕ್ಷಪ್ಪ ಕೊಕಟನೂರ, ಶಂಕರ ಸೋರಗಾಂವಿ, ಕುಮಾರ ಕದಂ, ರಾಜು ನಾವಿ, ಮಲ್ಲು ನಾವಿ, ಸಂತೋಷ ಹೊನಕಟ್ಟಿ ಸೇರಿದಂತೆ ಅನೇಕರು ಇದ್ದರು. ಆನಂದ ಬೀಳಗಿ ಸ್ವಾಗತಿಸಿದರು. ಮಾಧವಾನಂದ ಗುಟ್ಲಿ ನಿರೂಪಿಸಿ ವಂದಿಸಿದರು.

Social Plugin